ಜಿಲ್ಲೆ

ಹೆಣ್ಣು ಮಗುವಿನ ಶವ ಪತ್ತೆ

ಗುತ್ತಲ: ಮೂರ‌್ನಾಲ್ಕು ವರ್ಷದ ಹೆಣ್ಣು ಮಗುವಿನ ಶವ ಸಮೀಪದ ಕೂರಗುಂದ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

ತುಂಗಾ ಮೇಲ್ದಂಡೆ ಮುಖ್ಯಕಾಲುವೆಗೆ ಸೋಮವಾರ ಸಂಜೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ಸಂತೋಷ ಪವಾರ ಹಾಗೂ ಪಿಎಸ್‌ಐ ಬಸವರಾಜ ಬಿರಾದಾರ ಸಿಬ್ಬಂದಿ ದಯಾನಂದ ಪೂಜೇರಿ ಹಾಗೂ ಶಂಕರ ಈರೇಶನವರ ಪರಿಶೀಲನೆ ನಡೆಸಿದರು. ಮಗು ನಾಪತ್ತೆಯಾಗಿರುವ ಅಥವಾ ಮಗುವಿನ ಕುರಿತು ಯಾವುದರೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಮಗುವಿನ ಸಾವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗುತ್ತಲ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಮಗುವಿನ ಶವ ದೊರಕಿದೆ.