ಜಿಲ್ಲೆ

ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಶವ ಪತ್ತೆ

ವೀರೇಶ ಸೌದ್ರಿ

ಶಿರಸಿ: ತಾಲೂಕಿನ ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಅಪರಿಚಿತ ಶವ ಪತ್ತೆಯಾಗಿದೆ.

45ರಿಂದ 50 ವರ್ಷದ ಪುರುಷನ ಶವವಾಗಿದ್ದು, ಯಾರೋ ಗೋಣಿಚೀಲ ಮತ್ತು ಸೊಪ್ಪಿನಿಂದ ಮುಚ್ಚಿ ಹೋಗಿರುವುದಾಗಿ ತಿಳಿದು ಬಂದಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.