ಕಮಲಾಪುರ: ಸಿರಡೋಣ ಮತ್ತು ಮಹಾಗಾಂವ್ ಮಧ್ಯದ ರೈಲ್ವೆ ಸೇತುವೆ ಕೆಳಗಡೆ ಅಪರಿಚಿತ ಯುವಕನ ಶವ ಶುಕವ್ರಾರ ಪತ್ತೆಯಾಗಿದೆ. ಬೀದರ್-ಕಲಬುರಗಿ ರೈಲು ಪ್ರಯಾಣದ ವೇಳೆ ಕೆಳಗಡೆ ಬಿದ್ದು ಸಾವನ್ನಪ್ಪಿರಬಹುದು ಎಂದು ವಾಡಿ ರೈಲ್ವೆ ಪಿಎಸ್‌ಐ ಎಂ.ಪಾಶಾ ಸಂಶಯ ವ್ಯಕ್ತಪಡಿಸಿz್ದÁರೆ. ಮೃತಪಟ್ಟು ಐದಾರು ದಿನ ಆಗಿದ್ದರಿಂದ ಶವ ಕೊಳೆತಿದ್ದು, ಗುರುತು ಸಿಗದಂತಾಗಿದೆ. ಒಂದು ಕಿಮೀವರೆಗೆ ದುರ್ವಾಸನೆ ಬೀರುತ್ತಿದೆ. ೨೨-೨೫ ವಯಸ್ಸಿನ ಚೆಕ್ಸ್ ಶರ್ಟ್ ಧರಿಸಿದ್ದಾನೆ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.