ಮುಂಡಗೋಡ: ಪಟ್ಟಣದ ಮುಲ್ಲಾ ಓಣಿಯ ತೆರೆದ ಬಾವಿಯಲ್ಲಿ ಸೋಮವಾರ ವ್ಯಕ್ತಿಯ ಶವ ಪತ್ತೆಯಾಗಿದೆ.
ಮೃತನನ್ನು ಮುಲ್ಲಾ ಓಣಿಯ ಚಾಂದಬಾಷಾ ಚಿಕ್ಕೇರಿ(52) ಎಂದು ಗುರುತಿಸಲಾಗಿದೆ. ಇದೂ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಪೊಲೀಸರು ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣ ದಾಖಲಾಗಿದೆ.