ಕಾಸರಗೋಡು: ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಕ್ಕಾಡ್ ವೆಳ್ಳಚ್ಚಾಲ್ ವನ್ನಲೋತ್‌ನಲ್ಲಿ ವಾಸಿಸುತ್ತಿದ್ದ ಜೆಸಿಬಿ ಮಾಲೀಕ, ಆಂಧ್ರಪ್ರದೇಶ ಚಿತ್ತೂರು ನಿವಾಸಿ ಸುಧಾಕರ ರಾಜು (36) ಎಂಬುವರ ಮೃತದೇಹ ಮನೆಯ ಮಲಗುವ ಕೊಠಡಿಯೊಳಗೆ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಲಾಯಿತು. ಸುಧಾಕರ ರಾಜು ಕುಟುಂಬ ಕಳೆದ ಹಲವು ವರ್ಷಗಳಿಂದ ವನ್ನಲೋತ್‌ನಲ್ಲಿ ಮನೆ ಖರೀದಿಸಿ ವಾಸಿಸುತ್ತಿದ್ದರು. ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.