ಜಿಲ್ಲೆ

ಮೈಸೂರಿನಲ್ಲಿ ನ. 30ರಂದು ಬಾಡಿ ಬಿಲ್ಡಿಂಗ್, ಬೆಸ್ಟ್ ಫಿಸಿಕ್ ಸ್ಪರ್ಧೆ

ಮೈಸೂರು: ನಗರದ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ನ.30ರಂದು ರಾಜ್ಯ ಮಟ್ಟದ ಚಾಮರಾಜ ಒಡೆಯರ್ ಕಪ್ ಬಾಡಿ ಬಿಲ್ಡಿಂಗ್ ಸ್ಪರ್ಧೆ ಹಾಗೂ ಬೆಸ್ಟ್ ಫಿಸಿಕ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಜಿಮ್ ಮತ್ತು ಫಿಟ್ನೆಸ್ ಸಂಸ್ಥೆಯ ಅಧ್ಯಕ್ಷ ಹರ್ಷ ತಿಳಿಸಿದರು.

ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಒಟ್ಟಾರೆ 3.45 ಲಕ್ಷ ರೂ. ಬಹುಮಾನವಿದೆ. ಪ್ರಥಮ ಬಹುಮಾನವಾಗಿ 50 ಸಾವಿರ ರೂ., ಎರಡನೇ ಬಹುಮಾನ 25 ರೂ., ಮೂರನೇ ಬಹುಮಾನ 15 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇತ್ತೀಚೆಗೆ ಜನರಲ್ಲಿ ದೈಹಿಕ ಆರೋಗ್ಯ ಕುರಿತು ಅರಿವು ಕಡಿಮೆ ಆಗುತ್ತಿದೆ. ದೇಹದಾರ್ಢ್ಯತೆ ಬಗ್ಗೆ ಆಸಕ್ತಿಯೂ ಕಡಿಮೆ ಆಗುತ್ತಿದೆ. ಮ್ಯಾರಥಾನ್, ಸೈಕ್ಲಥಾನ್, ವಾಕಥಾನ್‌ಗಳು ನಡೆದರೂ ಬಾಡಿ ಬಿಲ್ಡಿಂಗ್ ಹಾಗೂ ಫಿಟ್ನೆಸ್‌ಗಳ ಬಗ್ಗೆ ತಿಳಿವಳಿಕೆ ಕೊರತೆಯಿದೆ. ಹೀಗಾಗಿ ಈ ಸ್ಪರ್ಧೆಯನ್ನು ವೀಕ್ಷಿಸುವಂತೆ ಎಲ್ಲರಲ್ಲೂ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಜಿಎಸ್‌ಎಸ್ ಸಂಸ್ಥೆಯ ಶ್ರೀಹರಿ, ಸಂದೇಶ್, ಬಸವರಾಜು, ಸುಮನ್ ಇದ್ದರು.