ಜಿಲ್ಲೆ

ಕುಶಾಲನಗರದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಶ್ರೀ ಗಣಪತಿ ರಥೋತ್ಸವದ ಪ್ರಯುಕ್ತ ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನ್ಯೂಜೆನ್ ಫಿಟ್ನೆಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಸ್ಪರ್ಧೆಯ "ಕಾವೇರಿ ಕ್ಲಾಸಿಕ್" ವಿಭಾಗದಲ್ಲಿ ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ಮೈಸೂರಿನ ನಜೀಬುಲ್ಲಾ ಖಾನ್ ಪಡೆದುಕೊಂಡರು. ಮೋಸ್ಟ್ ಮಸ್ಕ್ಯೂಲ್ ಮ್ಯಾನ್ ಪ್ರಶಸ್ತಿಗೆ ಮೈಸೂರಿನ ಎಬ್ನೆಜರ್ ಕೆ. ಪಾತ್ರರದರು. ಕಾವೇರಿ ಕ್ಲಾಸಿಕ್ ಟೈಟಲ್ ಪ್ರಶಸ್ತಿಯನ್ನು ದಾವಣಗೆರೆಯ ಸುಶಿಲ್ ಕುಮಾರ್ ಬಿ.ಕೆ. ಗೆದ್ದುಕೊಂಡರು. ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ ೨೫ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ ಸ್ಪರ್ಧೆಯಲ್ಲಿ ಟೈಟಲ್ ವಿನ್ನರ್ ಪ್ರಶಸ್ತಿಯನ್ನು ಫ್ಯೂಚರ್ ಫಿಟ್ನೆಸ್ ಹಾಸನ ಜಿಲ್ಲೆಯ ಸ್ಪರ್ಧಿ ಇರ್ಫಾನ್ ಎ. ಗೆದ್ದುಕೊಂಡರು. ರನ್ನರ್ಸ್ ಪ್ರಶಸ್ತಿ ಬೆಂಗಳೂರಿನ ಶ್ರೆಡ್ ಫಿಟ್ನೆಸ್ ಎಂ. ಶರತ್ ಕುಮಾರ್ ಪಾಲಾಯಿತು. ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ನಲ್ಲಿ ರಾಜ್ಯದ ವಿವಿಧ ಭಾಗಗಳ ೧೦ಕ್ಕೂ ಹೆಚ್ಚು ಸ್ಪರ್ಧೆಗಳು ಭಾಗವಹಿಸಿದ್ದರು.

ಮಿಸ್ಟರ್ ಕೊಡಗು ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ಕೊಡಗಿನ ೨೫ ಸ್ಪರ್ಧಿಗಳು ಭಾಗವಹಿಸಿದ್ದರು.

ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ನ್ಯೂಜೆನ್ ಫಿಟ್ನೆಸ್ ಕುಶಾಲನಗರದ ಸ್ವಾಗತ್ ಸೋಮಣ್ಣ ಪಡೆದುಕೊಂಡರು.

ಮೋಸ್ಟ್ ಮಸ್ಕ್ಯೂಲರ್ ಮ್ಯಾನ್ ಪ್ರಶಸ್ತಿಯನ್ನು ನ್ಯೂಜೆನ್ ಫಿಟ್ನೆಸ್ ಕುಶಾಲನಗರದ ಅಪ್ಪಣ್ಣ ವಿ. ಪಡೆದರು.

ಮಿಸ್ಟರ್ ಕೊಡಗು ಕ್ಲಾಸಿಕ್ ಪ್ರಶಸ್ತಿಯನ್ನು ಲೈಟ್ ವೈಟ್ ಫಿಟ್ನೆಸ್ ಕುಶಾಲನಗರದ ಪ್ರಕಾಶ್ ಹೆಚ್. ಆರ್. ಪಡೆದುಕೊಂಡರು.

ಈ ಸಂದರ್ಭ ಮಾತನಾಡಿದ ಸ್ಪರ್ಧೆಯ ಆಯೋಜಕ ಕುಶಾಲನಗರದ ಸುಮೈರ್ ಕೆಜಿಎಸ್, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಬಾಡಿಬಿಲ್ಡರ್ಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದ ೩೦೦ ಕ್ಕೂ ಅಧಿಕ ಬಾಡಿಬಿಲ್ಡರ್ಸ್ ಭಾಗವಹಿಸಿದ್ದರು. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಮರದಲ್ಲಿ ಕೆತ್ತನೆ ಮಾಡಿರುವ ಅತ್ಯಾಕರ್ಷಕ ಬಾಡಿಬಿಲ್ಡರ್ಸ್ ಮಾದರಿಯ ಟ್ರೋಫಿ ಮತ್ತು ನಗದು ಬಹುಮಾನ ಕೊಡಲಾಗಿದೆ. ೧೦೦೦ಕ್ಕೂ ಅಧಿಕ ಸಾರ್ವಜನಿಕರು ದೇಹದಾರ್ಢ್ಯ ಸ್ಪರ್ಧೆ ವೀಕ್ಷಿಸಿದ್ದಾರೆ. ಪ್ರತೀ ವರ್ಷವೂ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭ ಆಯೋಜಕರಾದ ಪವನ್, ತೀರ್ಥ, ಅಪ್ಪಣ್ಣ, ಹರ್ಷ ಹಾಗೂ ಇತರರು ಇದ್ದರು.