ಬೀರೂರು ಸಮೀಪದ ಯರೇಹಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯನ್ನು ಜಿಗಣೇಹಳ್ಳಿ ನೀಲಕಂಠಪ್ಪ ಉದ್ಘಾಟಿಸಿದರು. ರಘು, ಜಯಣ್ಣ, ಮಂಜಪ್ಪ, ಕೃಷ್ಣಮೂರ್ತಿ, ಉಮೇಶ್ ಇತರರಿದ್ದರು.  
ಜಿಲ್ಲೆ

ಕ್ರೀಡೆಯಿಂದ ದೇಹ, ಮನಸ್ಸು ಸದೃಢ

Shivamogga - Desk - Vinayakumar D B

ಬೀರೂರು: ಆಟೋಟಗಳಿಂದ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳು ಬೆಳೆಯುತ್ತದೆ ಎಂದು ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.

ಸಮೀಪದ ಯರೇಹಳ್ಳಿ ಗ್ರಾಮದಲ್ಲಿ ಭಾನುವಾರ ಜೋಡೆತ್ತು ಬಾಯ್ಸ ತಂಡದಿಂದ ಆಯೋಜಿಸಿದ್ದ 9ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಯುವಕರ ತಂಡ 9 ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ. ಇದೇ ರೀತಿ ಗ್ರಾಮೀಣ ಸೊಗಡಿನ ಆಟೋಟಗಳ ಪಂದ್ಯಾವಳಿ ಆಯೋಜಿಸಲಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಬೆಳಕಿಗೆ ತರುವಂತಹ ಕೆಲಸವಾಗಲಿ ಎಂದರು.
ಕಡೂರು ತಾಲೂಕಿನ ವಿವಿಧ ಗ್ರಾಮಗಳಿಂದ 35ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪ್ರಥಮ ಬಹುಮಾನವಾಗಿ 25 ಸಾವಿರ ರೂ., ಎರಡನೇ ಬಹುಮಾನ 15 ಸಾವಿರ ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ನೀಡುವುದಾಗಿ ಆಯೋಜಕರು ತಿಳಿಸಿದರು. ಆಯೋಜಕರಾದ ರಘು, ಜಯಣ್ಣ, ಮಂಜಪ್ಪ, ಕೃಷ್ಣಮೂರ್ತಿ, ಉಮೇಶ್ ಇತರರಿದ್ದರು.