ಜಿಲ್ಲೆ

ಮಲ್ಪೆಯಲ್ಲಿ ಮುಳುಗಿದ ನಾಡದೋಣಿ- ಐವರು ಮೀನುಗಾರರ ರಕ್ಷಣೆ

Mangaluru - Desk - Rajesh Shetty

ಉಡುಪಿ: ಮಲ್ಪೆ ಅಳಿವೆಬಾಗಿಲಿನಲ್ಲಿ ಮಂಗಳವಾರ ಸಾಯಂಕಾಲ ಹೊರರಾಜ್ಯದ ನಾಡದೋಣಿ ಮುಳುಗಿದ್ದು, ಕೇರಳ ಮತ್ತು ತಮಿಳುನಾಡಿನ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.

ಕೇರಳ ಮೂಲದ ವಿನ್ಸೆಂಟ್ ಮತ್ತು ಜಯಶೀಲ, ತಮಿಳುನಾಡಿನ ಸಿರಿನ್, ಸಂತೋಷ ಮತ್ತು ಅಂಟೋನಿ ರಕ್ಷಿಸಲ್ಪಟ್ಟವರು. ಮಲ್ಪೆ ಸಮುದ್ರತೀರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಸಣ್ಣ ರಂಧ್ರದ ಮೂಲಕ ನೀರು ದೋಣಿಯೊಳಗೆ ಬಂದಿದ್ದು, ನಾಡದೋಣಿ ಮುಳುಗುವುದನ್ನು ಗಮನಿಸಿದ ಬೇರೆ ಬೋಟ್‌ನಲ್ಲಿದ್ದವರು ಮೀನುಗಾರರನ್ನು ರಕ್ಷಿಸಿದ್ದಾರೆ.