ಜಿಲ್ಲೆ

ಮುಳುಗಡೆ ಹಂತದಲ್ಲಿ ದೋಣಿ, ಆರು ಮೀನುಗಾರರ ಕ್ಷಣೆ

Uttara Kannada - Subash Hegde

ಕಾರವಾರ:ಹವಾಮಾನ ವೈಪರೀತ್ಯದಿಂದ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕೆ ದೋಣಿ ಯನ್ನು ಹಾಗೂ ಅದರಲ್ಲಿದ್ದ 6 ಮೀನುಗಾರರನ್ನು ಸಹ ಮೀನುಗಾರಿಕೆ ದೋಣಿಗಳು ಬುಧವಾರ ರಕ್ಷಿಸಿವೆ.ಮಂಗಳೂರಿನ ಇಂದಾದ್ ಎಂಬುವವರಿಗೆ ಸೇರಿದ ರಾಯಲ್ ಬ್ಲೂ ಹೆಸರಿನ ಪರ್ಸೀನ್ ಬೋಟ್ ಕಾರವಾರದಿಂದ ಸುಮಾರು 30 ನಾಟಿಕಲ್ ಮೈಲ್ ದೂರ ಗೋವಾದ ಬೇತುಲ್ ಭಾಗದಲ್ಲಿ ಅಪಾಯಕ್ಕೆ ಸಿಲುಕಿತ್ತು. ಬೋಟ್‌ನ ತಳದಲ್ಲಿ ಬಿರುಕು ಬಿಟ್ಟಿದ್ದು, ನೀರು ಒಳಬರಲಾರಂಭಿಸಿತ್ತು. ಅದನ್ನು ವೈಟ್ ಆರ್ಬಿಟ್, ಬ್ಲ್ಯಾಕ್ ಬೆರ್ರಿ,  ಏಶಿಯನ್ ಬ್ಲ್ಯೂ, ಸೀ ಫ್ಲವರ್, ಸೀ ಪ್ರಿನ್ಸ್, ಸೀ ಹಂಟರ್ ಹೆಸರಿನ ಬೋಟುಗಳ ನೆರವಿನೊಂದಿಗೆ ರಕ್ಷಿಸಿ ಕಾರವಾರ ಬಂದರಿಗೆ ಕರೆತರಲಾಯಿತು. ಬೋಟ್‌ನ ಒಳಗೆ ತುಂಬಿದ ನೀರನ್ನು ಪಂಪ್ ಮಾಡಿ ಹೊರ ಹಾಕಲಾಯಿತು ಮತ್ತು. ಎರಡು ಬೋಟ್‌ಗಳಿಗೆ ಜೋಡಿಸಿ ಅದನ್ನು ಕಾರವಾರಕ್ಕೆ ಎಳೆತರಲಾಯಿತು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮೀನುಗಾರರು ತಿಳಿಸಿದ್ದಾರೆ.