ಜಿಲ್ಲೆ

ಬೋಟ್ ಮುಳುಗಡೆ, 10 ಮೀನುಗಾರರ ರಕ್ಷಣೆ

Dakshina Kannada

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮದ್ರ ಮೀನುಗಾರಿಕಾ ಬೋಟ್ ಮಂಗಳೂರು ಸಮೀಪ ಸಮುದ್ರ ಮಧ್ಯೆ ದಡದಿಂದ 11 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ 10 ಮಂದಿ ತಮಿಳುನಾಡು ಮೂಲದ ಮೀನುಗಾರರನ್ನು ರಕ್ಷಿಸಲಾಗಿದೆ.

ಮಲ್ಪೆಯ ಮಹೇಶ್ ಕುಂದರ್ ಮಾಲೀಕತ್ವದ ಮಕರಧ್ವಜ ಆಳಸಮುದ್ರ ಬೋಟ್ ಆ.17ರಂದು ಸಾಯಂಕಾಲ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಆ.23ರಂದು ಸಾಯಂಕಾಲ ಸಮುದ್ರದಲ್ಲಿ ಜೋರಾದ ಗಾಳಿ ಮಳೆಗೆ ಬೋಟ್‌ನ ಇಂಜಿನ್ ರೂಂನಲ್ಲಿ ನೀರು ತುಂಬಿ ಇಂಜಿನ್ ಕೆಟ್ಟಿತ್ತು. ನಂತರ ಬೋಟ್ ಸಂಪೂರ್ಣ ಮುಳುಗಡೆಗೊಂಡಿದ್ದು, ಸಮೀಪದಲ್ಲಿದ್ದ ಮಾನ್ವಿತನ್ವಿತ್ ಬೋಟ್ ಸಿಬ್ಬಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.