ಜಿಲ್ಲೆ

ಸಮುದ್ರದಲ್ಲಿ ಭಾರಿ ಬಿರುಗಾಳಿ ದಡ ಸೇರಿದ ದೋಣಿಗಳು

Uttara Kannada - Subash Hegde

ಕಾರವಾರ: ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತು ಉಂಟಾದ ಪರಿಣಾಮ ಕರಾವಳಿಯ ಹವಾಮಾನದಲ್ಲಿ ಭಾರೀ ವೈಪರೀತ್ಯ ಕಂಡುಬರುತ್ತಿದೆ. ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುತ್ತಿದೆ. ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರಿಂದ ಮೀನುಗಾರಿಕೆಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಆಳ ಸಮುದ್ರ ಮೀನುಗಾರಿಕೆಗೆ ಆಗಮಿಸಿದ್ದ ಉಡುಪಿ ಜಿಲ್ಲೆಯ ಮಲ್ಪೆ ಭಾಗದ ದೋಣಿಗಳು ಕಾರವಾರ ಬೈತಖೋಲ್ ಬಂದರಿಗೆ ಬಂದು ಆಶ್ರಯ ಪಡೆದಿವೆ. ಗುರುವಾರ ರಾತ್ರಿ 50 ಕ್ಕೂ ಹೆಚ್ಚು ದೋಣಿಗಳು ಬಂದು ಲಂಗರು ಹಾಕಿವೆ. ಮೀನುಗಳನ್ನು ಕಾರವಾರದಲ್ಲಿ ಇಳಿಸಲಾಗಿದೆ.

ಗಾಳಿ ಹೆಚ್ಚಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ತಿಳಿಸಿದೆ.