ಬೆಂಗಳೂರು: ನಗರದ ಎಚ್ಎಸ್ಆರ್ ಬಡಾವಣೆಯಲ್ಲಿ ಬಿಎಂಟಿಸಿ ಫೀಡರ್ ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ಇದೇ ವೇಳೆ ಬಡಾವಣೆಯ ನಾಗರಿಕರಿಗೆ ಫೀಡರ್ ಬಸ್ ಸೇವೆ ಬಳಸಿಕೊಳ್ಳುವಂತೆ ಬೀದಿ ನಾಟಕ ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು.
ಎಚ್ಎಸ್ಆರ್ ಬಡಾವಣೆಯಲ್ಲಿ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಹೆಚ್ಚಿನ ಉಪಯೋಗವಾಗಲಿದೆ. ಈ ಸೇವೆ ಬಡಾವಣೆಯ 7 ಹಂತಗಳಲ್ಲೂ ಲಭ್ಯವಿದ್ದು, 10 ರೂ. ದರ ನಿಗದಿಪಡಿಸಲಾಗಿದೆ. ಅಗರ, ಪರಂಗಿಪಾಳ್ಯ, ಮಂಗಮ್ಮನಪಾಳ್ಯ ಸೇರಿದಂತೆ ಹಲವು ಕಡೆಗಳಿಗೆ ಬಸ್ ಸಂಚಾರ ಇದೆ.