ಜಿಲ್ಲೆ

ಸ್ಟೇರಿಂಗ್ ಜಾಮ್ ಹಳ್ಳಕ್ಕೆ ಬಿದ್ದ ಬಿಎಂಟಿಸಿ ಬಸ್

ಗಂಗಾಧರ ಬಿ ವಿ

‌ ಬಿಡದಿ:‌ ಬಿಎಂಟಿಸಿ ಬಸ್ ನ ಸ್ಟೇರಿಂಗ್ ಜಾಮ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಬದಿಯ ಹಳ್ಳಕ್ಕೆ ಬಸ್ ಜಾರಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಹೆಜ್ಜಾಲ‌ ಗೇಟ್ ಬಳಿ ನಡೆದಿದೆ.

ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಬಾರಿ ಅನಾಹುತ ತಪ್ಪಿದೆ. ಬಿಎಂಟಿಸಿಗೆ ಸೇರಿದ ಎಲೆಕ್ಟ್ರಿಕ್ ಬಸ್ ನ ಸ್ಟೇರಿಂಗ್ ಜಾಂ ಆಗಿ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ಬಿಡದಿ ಕಡೆಗೆ ಬಸ್ ಪ್ರಯಾಣ ಮಾಡುತಿತ್ತು.

ಹೆಜ್ಜಾಲ ಗೇಟ್ ಬಿಟ್ಟು ತುಸು ದೂರ ಬರುತ್ತಿದ್ದ ಹಾಗೆ ಸ್ಟೇರಿಂಗ್ ಜಾಂ ಆಗಿದೆ ಹಾಗಾಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯ ಪಕ್ಕದಲ್ಲಿನ ಹಳ್ಳಕ್ಕೆ ಜಾರಿದೆ. ಸದ್ಯ ಬಸ್ ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದನ್ನ ವರೆತು ಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಅಪಘಾತ ವಿಷಯ ತಿಳಿದ ಬಿಎಂಟಿಸಿ ಅಧಿಕಾರಿಗಳು ಹಾಗೂ ಬಿಡದಿ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.