ಬೆಂಗಳೂರು: ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆಯನ್ನು ನಡೆಸುವ ಸಲುವಾಗಿ, ಆಗಸ್ಟ್ ತಿಂಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನೇರಳೆ ಮಾರ್ಗದ ಕಾರ್ಯಾಚರಣೆಯ ಸಮಯದಲ್ಲಿ ವ್ಯತ್ಯಯದ ವಿವರ
17.08.2023
- ಕೆಂಗೇರಿ ಮತ್ತು ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಸದರಿ ದಿನದಂದು ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ.
ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಬೆಳಿಗ್ಗೆ 5.00 ರಿಂದ ರಾತ್ರಿ 11.00 ರವರೆಗೆ ರೈಲು ಸೇವೆಗಳು ಲಭ್ಯವಿರುತ್ತದೆ.
23.08.2023 ಮತ್ತು 24.08.2023
ಬೆಳಗ್ಗೆ 7.00 ಗಂಟೆಯ ನಂತರ ಕೆಂಗೇರಿಯಿಂದ ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಲಭ್ಯವಿರುತ್ತದೆ.
ಕೆಂಗೇರಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 7.00 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಮತ್ತು ಅವಧಿಯಲ್ಲಿ ಮೈಸೂರು ರಸ್ತೆ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.
20.08.2023 ರಿಂದ 29.08.2023
- ಬೈಯಪ್ಪನಹಳ್ಳಿ ಟರ್ಮಿನಲ್ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ (ಭಾನುವಾರ) ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮಾರ್ಗಗಳ ನಡುವೆ ಬೆಳಿಗ್ಗೆ 7.00 ಗಂಟೆಯವರೆಗೆ ಯಾವುದೇ ರೈಲು ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ.
- 23.08.2023 (ಭುಧವಾರ) ಮತ್ತು 24.08.2023 (ಗುರವಾರ) ದಂದು ಬೆಳಿಗ್ಗೆ 5.00 ಗಂಟೆಯಿಂದ 7.00 ಗಂಟೆಯ ವರೆಗೆ ಮೈಸೂರು ರಸ್ತೆ ನಿಲ್ದಾಣದಲ್ಲಿ ರೈಲುಗಳ ಸೇವೆ ಕೊನೆಗೊಳ್ಳುತ್ತದೆ ಮತ್ತು ಇತರೆ ದಿನಗಳಲ್ಲಿ ರೈಲುಗಳು ಕೆಂಗೇರಿ ನಿಲ್ದಾಣದ ವರೆಗೆ ರೈಲು ಸೇವೆ ಲಭ್ಯವಿರುತ್ತದೆ.
ಬೆಳಿಗ್ಗೆ 7.00 ಗಂಟೆಯ ನಂತರ ಬೈಯಪ್ಪನಹಳ್ಳಿಯಿಂದ ಕೆಂಗೇರಿ ನಿಲ್ದಾಣದ ಮಾರ್ಗಗಳ ನಡುವೆ ಎಂದಿನಂತೆ ಸೇವೆಗಳು ಲಭ್ಯವಿರುತ್ತದೆ.
ಹಸಿರು ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.