ಸಾಂದರ್ಭಿಕ ಚಿತ್ರ 
ಜಿಲ್ಲೆ

ಬಿಎಂಆರ್​ಸಿಎಲ್​ - ಜಿಆರ್​ಐಎಚ್​ಎ ಒಪ್ಪಂದ; ಹಸಿರು ಕಟ್ಟಡ ನಿರ್ಮಾಣಕ್ಕೆ ಉತ್ತೇಜನ

Bengaluru - General - Rama Kishan K V

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮತ್ತು ಗ್ರೀನ್​ ರೇಟಿಂಗ್​ ಫಾರ್​ ಇಂಟಿಗ್ರೇಟೆಡ್​ ಹ್ಯಾಬಿಟಾಟ್​ ಅಸೆಸ್ಮೆಂಟ್​ ಕೌನ್ಸಿಲ್​ (ಜಿಆರ್​ಐಎಚ್​ಎ) ಹೈದರಾಬಾದ್​ನಲ್ಲಿ ಶುಕ್ರವಾರ ನಡೆದ 2ನೇ ಜಿಆರ್​ಐಎಚ್​ಎ ಪ್ರಾದೇಶಿಕ ಸಮಾವೇಶದಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಮಾಡಿವೆ.

ಗೃಹ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್​ ಸೇಠ್​ ಮತ್ತು ಬಿಎಂಆರ್​ಸಿಎಲ್​ ಪರವಾಗಿ ವಾಸ್ತುಶಿಲ್ಪಿ ಆಶಿಶ್​ ಕಪೂರ್​ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಿಎಂಆರ್​ಸಿಎಲ್​ನ ನಿಯೋಜನೆ ಮತ್ತು ಯೋಜನಾ ನಿರ್ದೇಶಕ ಡಿ. ರಾಧಾಕೃಷ್ಣ ರೆಡ್ಡಿ, ಸಿವಿಲ್​ ಸಲಹೆಗಾರ ಅಭಯ್​ಕುಮಾರ್​ ರೈ ಇದ್ದರು.

ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಹಸಿರು ಕಟ್ಟಡ ನಿರ್ಮಾಣವನ್ನು ಉತ್ತೇಜಿಸುತ್ತವೆ. ಒಪ್ಪಂದದ ವ್ಯಾಪ್ತಿಯಡಿಯಲ್ಲಿ ಸಂಬಂಧಪಟ್ಟ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಹಸಿರು ಕಟ್ಟಡಗಳ ೇತ್ರದಲ್ಲಿ ಸಾಮರ್ಥ್ಯ ವೃದ್ಧಿ, ಗೃಹ ರೇಟಿಂಗ್​ಗಾಗಿ ಯೋಜನೆಗಳ ನೋಂದಣಿ ಮತ್ತು ವಿವಿಧ ವೇದಿಕೆಗಳಲ್ಲಿ ಮಾಹಿತಿಯ ಪ್ರಸಾರವನ್ನು ಹಂಚಿಕೊಳ್ಳುವುದನ್ನು ಒಳಗೊಂಡಿದೆ.

ಈ ತಿಳಿವಳಿಕೆ ಒಪ್ಪಂದವು ನಮ್ಮ ಮೆಟ್ರೋ ಕಾರಿಡಾರ್​ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಹಸಿರು ಕಟ್ಟಡದ ಕಲ್ಪನೆಯನ್ನು ಹೆಚ್ಚು ಅಳವಡಿಸಿಕೊಳ್ಳಲು ಮತ್ತು ನಮ್ಮ ಮೆಟ್ರೋ ನಿಲ್ದಾಣಗಳ ಗ್ರೀನ್​ ಬಿಲ್ಡಿಂಗ್​ ಪ್ರಮಾಣೀಕರಣ ಪಡೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.