ಜಿಲ್ಲೆ

ಮೋಳ್ಕೊಡದಲ್ಲಿ ಹಾರಿ ಹೋದ ಮೇಲ್ಛಾವಣಿ

ವಿನಯ ಹೆಗಡೆ

ಹೊನ್ನಾವರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರ ಕಡಿಮೆಯಾಗಿದೆ. ಜೋರಾದ ಗಾಳಿ ಬೀಸುತ್ತಿರುವ ಹಿನ್ನೆಲೆ ಹಾನಿ ಮುಂದುವರೆದಿದೆ.

ಮೋಳ್ಕೊಡದ ಶ್ರೀಧರ ಬೀರಪ್ಪ ಅಂಬಿಗ ಅವರ ವಾಸ್ತವ್ಯದ ಮನೆಯ ಮೇಲ್ಛಾಣಿಯು ಜೋರಾದ ಗಾಳಿಗೆ ಕಿತ್ತು ದೂರ ಹೋಗಿ ಬಿದ್ದಿದೆ. ಯಾವುದೇ ಜನ ಜಾನುವಾರು ಪ್ರಾಣ ಹಾನಿ ಸಂಭವಿಸಿಲ್ಲ.

ದೇವರಮೋಟೆಯ ಚಂದ್ರು ಹನುಮಂತ ಗೌಡ ಅವರ ಮನೆಯ ಮೇಲ್ಛಾವಣಿ ಗಾಳಿ-ಮಳೆಗೆ ಹಾನಿಯಾಗಿದೆ. ತೆರೆದಿದ್ದ ಎಲ್ಲ ಕಾಳಜಿ ಕೇಂದ್ರಗಳು ಬಂದ್ ಆಗಿವೆ. ತುಂಬಿ ಹರಿಯುತ್ತಿದ್ದ ಗುಂಡಬಾಳ, ಭಾಸ್ಕೇರಿ ಮತ್ತು ಬಡಗಣಿ ನದಿಯ ನೀರು ಇಳಿದಿದೆ.

ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕುಟುಂಬಗಳು ತಮ್ಮ ಮನೆಗಳಿಗೆ ತೆರಳಿದ್ದಾರೆ.

ಮರ ಬಿದ್ದು ತೋಟಕ್ಕೆ ಹಾನಿ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಿಡುವು ನೀಡಿದೆ. ತಾಲೂಕಿನ ಮಾಗೋಡ ಸಮೀಪದ ಕಂಚಗಲ್ ಬಳಿ ಸುಬ್ರಾಯ ಭಟ್ಟ ಅವರ ಅಡಕೆ ತೋಟದ ಮೇಲೆ ಬೃಹತ್ ಮರವೊಂದು ಬಿದ್ದು 20 ಕ್ಕೂ ಹೆಚ್ಚು ಅಡಕೆ ಮರಗಳು ಧರೆಗುರುಳಿವೆ.