ಆಲ್ದೂರು: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಭಾರಿ ಗಾಳಿ, ಮಳೆಗೆ ಸಂತೆಮೈದಾನದ ನಹೀಮ್ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದೆ.
ಸಂತೆಮೈದಾನದ ನಿಗರ್ ಸುಲ್ತಾನ್, ಸಂಮೀಮಾ, ಜುಬೇದಾ ಅವರ ಮನೆ ಛಾವಣಿ ಗಾಳಿಗೆ ಹಾರಿಹೋಗಿವೆ. ಸಂತೆಮೈದಾನದಲ್ಲೇ ನಾಲ್ಕು ಮನೆಗಳ ಛಾವಣಿ ಹಾರಿಹೋಗಿದ್ದು, ಪಟ್ಟಣದ ಜೂನಿಯರ್ ಕಾಲೇಜಿನ ಕೊಠಡಿಯ ಶೀಟ್‌ಗಳೂ ಗಾಳಿಗೆ ಹಾರಿಹೋಗಿವೆ. ಹಾನಿಗೊಂಡ ಮನೆಗಳಿಗೆ ಸಂಜೆೆ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಭೇಟಿ ನೀಡಿ ವೀಕ್ಷಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುದರ್ಶನ್, ಅವಿನಾಶ್ ಇತರರಿದ್ದರು.