ವಿಐಎಸ್‌ಎಲ್ ಕಾರ್ಖಾನೆಗೆ ಸರಬರಾಜಾದ ಬ್ಲೂಮ್‌ಗಳಿಗೆ ಕಾರ್ಖಾನೆಯ ಕಾರ್ಮಿಕರು, ಆಡಳಿತ ಮಂಡಳಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಸುರೇಶ್, ಪ್ರವೀಣ್‌ಕುಮಾರ್ ಇತರರಿದ್ದರು. 
ಜಿಲ್ಲೆ

ವಿಐಎಸ್‌ಎಲ್‌ಗೆ 19 ವ್ಯಾಗನ್‌ಗಳ ಬ್ಲೂಮ್

Shivamogga - Desk - Megha MS

ಭದ್ರಾವತಿ: ಸೈಲ್‌ನ ಬಿಲಾಯ್ ಉಕ್ಕು ಘಟಕದಿಂದ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಮಂಗಳವಾರ ಸಂಜೆ ಮೊದಲ ಹಂತವಾಗಿ 19 ವ್ಯಾಗನ್‌ಗಳ ಬ್ಲೂಮ್‌ಗಳು ಸರಬರಾಜಾಗಿದ್ದು ಕಾರ್ಖಾನೆಯ ಕಾರ್ಮಿಕ ವಲಯ ಹಾಗೂ ಅಽಕಾರಿ ವರ್ಗ ಬ್ಲೂಮ್‌ಗಳಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿತು.

ಬ್ಲೂಮ್‌ಗಳ ಆಗಮನದಿಂದಾಗಿ ಕಾರ್ಖಾನೆಯ ಪ್ರೆÊಮರಿ ಘಟಕ ತನ್ನ ಉತ್ಪಾದನಾ ಚಟುವಟಿಕೆ ಆರಂಭಿಸಲಿದ್ದು ಗುತ್ತಿಗೆ ಕಾರ್ಮಿಕರು ಹಾಗೂ ಕಾಯಂ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕಾರ್ಮಿಕ ವಲಯದಲ್ಲಿ ಬೇರೂರಿದ್ದ ಉದ್ಯೋಗ ಸೃಷ್ಟಿಯ ಆಸೆ ಜೀವಂತವಾಗಿದೆ. ಇದಕ್ಕೂ ಮೊದಲು ಬಾರ್ ಮಿಲ್ ಆರಂಭವಾಗಬೇಕಿತ್ತು. ಆದರೆ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬAದ ಹಿನ್ನೆಲೆಯಲ್ಲಿ ಬಾರ್‌ಮಿಲ್‌ಗೂ ಮೊದಲೇ ಪ್ರೆÊಮರಿ ಘಟಕದಲ್ಲಿ ಉತ್ಪಾದನೆ ಮರು ಆರಂಭಗೊಳ್ಳುತ್ತಿದೆ.