ಹುಬ್ಬಳ್ಳಿ: ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇದರಿಂದ ಜೀವ ಉಳಿಯುವುದಲ್ಲದೇ ದಾನ ಪಡೆದವರು ಸದಾ ನಿಮ್ಮನ್ನು ದೇವರಂತೆ ಸ್ಮರಿಸುವರು ಎಂದು ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಹೇಳಿದರು.
ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಕಿಮ್ಸ್ ವಿದ್ಯಾರ್ಥಿಗಳ ಸಂಘ, ಕಿಮ್ಸ್ ವೈದ್ಯರ ಸಂಘದ ಆಶ್ರಯದಲ್ಲಿ ಇಲ್ಲಿಯ ಕಿಮ್ಸ್ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತ ಕೊಡುವುದರಿಂದ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಬರುತ್ತದೆ. ಅಶಕ್ತರಾಗುತ್ತಾರೆ ಅಥವಾ ಇನ್ನೇನೋ ಅಗುತ್ತದೆ ಎಂಬ ಮೂಢನಂಬಿಕೆ ಬಿಟ್ಟು ಹೊರಬರಬೇಕು. ಆದರೆ, ಎಂಥವರು ರಕ್ತ ದಾನ ಮಾಡಬಹುದು ಎಂಬುದರ ಮಾಹಿತಿಯನ್ನು ತಜ್ಞ ವೈದ್ಯರಿಂದ ಪಡೆಯಬೇಕು ಎಂದು ತಿಳಿವಳಿಕೆ ನೀಡಿದರು.
ಅಲ್ಲದೇ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು, ಮಾಡುವಂತೆ ಪ್ರೇರೇಪಿಸಬೇಕೆಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಡಾ. ಅರುಣ ವಾಳ್ವೇಕರ, ಡಾ. ಕೆ.ಎಫ್. ಕಮ್ಮಾರ, ಡಾ. ನಾರಾಯಣ ಹೆಬಸೂರ, ಡಾ.ಎಸ್.ವೈ. ಮುಲ್ಕೀಪಾಟೀಲ, ಡಾ. ರವಿ ರಾಠೋಡ, ಡಾ. ಜಾನಕಿ ತೊರವಿ, ಡಾ. ಕವಿತಾ ಏವೂರ, ಡಾ. ಸವಿತಾ ನಿನ್ನೇಕರ, ಡಾ. ಸುನೀತಾ ವೆರ್ಣೇಕರ, ಎಂಬಿಬಿಎಸ್, ಪ್ಯಾರಾಮೆಡಿಕಲ್, ನಸಿರ್ಂಗ್ ಕಾಲೇಜ್ ವಿದ್ಯಾರ್ಥಿಗಳು ಸೇರಿ ಇತರರು ಇದ್ದರು.