ಯಲಬುರ್ಗಾ ತಾಲೂಕಿನ ಗಾಣಧಾಳ ಆರೋಗ್ಯ ಕೇಂದ್ರದಲ್ಲಿ ಸಂಜೀವಿನಿ ರಕ್ತನಿಧಿ ಕೇಂದ್ರದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ಪ್ರಶಂಸೆ ಪತ್ರ ನೀಡಲಾಯಿತು. ಕೇಂದ್ರದ ವ್ಯವಸ್ಥಾಪಕ ಮೈಬೂಬ್ ಜಿಲಾನಿ, ಸಂದೇಶ, ಸುರೇಖಾ, ಆರೋಗ್ಯ ಸಿಬ್ಬಂದಿ ಮುತ್ತಯ್ಯ ವಸ್ತ್ರದ, ವೀರೇಶಕುಮಾರ ಕರಮುಡಿ, ಲಕ್ಷ್ಮಣ, ರಮೇಶ, ಯಲ್ಲಮ್ಮ, ಮಂಜುಳಾ, ಅಶ್ವಿನಿ ಮತ್ತು ಆಶಾ ಕಾರ್ಯಕರ್ತೆಯರಿದ್ದರು. 
ಜಿಲ್ಲೆ

ರಕ್ತದಾನ ಮಾಡಲು ಯುವಕರು ಮುಂದೆ ಬರಲಿ

ರುದ್ರಪ್ಪ ವಾಲಿ

ಯಲಬುರ್ಗಾ: ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಟಿ.ಜೆ.ರಮೇಶ ಹೇಳಿದರು. ತಾಲೂಕಿನ ಗಾಣಧಾಳ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಸಂಜೀವಿನಿ ರಕ್ತನಿಧಿ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಟವಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕರ ಜೀವನಕ್ಕೆ ರಕ್ತದಾನ ಸಹಕಾರಿಯಾಗಿದೆ. ಸಾವು ಬದುಕಿನ ನಡುವೆ ಹೋರಾಡುವವರ ಜೀವ ಉಳಿಸಲು ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಯುವ ಜನಾಂಗ ರಕ್ತದಾನ ಮಾಡಲು ಮುಂದಾಗಬೇಕು ಎಂದರು.