ಕುಂದಾಪುರ: ರಕ್ತದಾನವು ಒಂದು ಉದ್ಧಾತ ಕಾರ್ಯವಾಗಿದೆ. ರೋಗಿಗಳ ಜೀವ ಉಳಿಸಲು ಸಹಾಯಕವಾಗುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಹಾನಿಯಾಗದೆ ಹಲವಾರು ರೀತಿಯ ಆರೋಗ್ಯ ಪ್ರಾಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಹೇಳಿದರು.
ಆನಗಳ್ಳಿ ದತ್ತಾಶ್ರಮ, ಗೆಳೆಯರ ಬಳಗ, ಉಡುಪಿ ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್, ರಿಜಾಯ್ ಇವೆಂಟ್ ಗ್ರೂಪ್ ಸಹಯೋಗದಲ್ಲಿ ಕೆಎಂಸಿ ಆಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಕುಂದಾಪುರ ಭಾರತೀಯ ರೆಡ್‌ಕ್ರಾಸ್ ಸಹಭಾಗಿತ್ವದಲ್ಲಿ ಆನಗಳ್ಳಿ ಗೆಳೆಯರ ಬಳಗ ಕಲಾಮಂದಿರದಲ್ಲಿ ಭಾನುವಾರ ನಡೆದ ಬೃಹತ್ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಮ್ಮೂರ ಹಬ್ಬದ ಲಾಂಛನವನ್ನು ಕನ್ನಡ ಚಲನಚಿತ್ರ ನಟ, ನಿರ್ಮಾಪಕ ರವಿ ಬಸ್ರೂರು ಹಾಗೂ ನಟ ಪ್ರದೀಪ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯನ್ ಮಣಿಪಾಲ, ಗೆಳೆಯರ ಬಳಗ ಅಧ್ಯಕ್ಷ ಗಣೇಶ್ ಕೆ., ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಸುನೀಲ್‌ಕುಮಾರ್ ಶೆಟ್ಟಿ ಹೇರಿಕುದ್ರು, ಬಿ.ಬಿ.ಹೆಗ್ಡೆ ಕಾಲೇಜು ಉಪನ್ಯಾಸಕ ಚೇತನ್ ಶೆಟ್ಟಿ ಕೋವಾಡಿ, ಪತ್ರಕರ್ತ ನಾಗರಾಜ್ ರಾಯಪ್ಪನಮಠ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಮಣಿಪಾಲ ಕೆಎಂಸಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಡಾ.ಶಮಿ ಶಾಸ್ತ್ರಿ, ಕಾರ್ಯಕ್ರಮದ ಆಯೋಜಕ ಶರತ್ ಕಾಂಚನ್ ಆನಗಳ್ಳಿ ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಗರಾಜ್ ಸ್ವಾಗತಿಸಿದರು. ಸಂಜನಾ ಭಟ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸುರೇಂದ್ರ ಕಾಂಚನ್ ಸಂಗಮ್ ವಂದಿಸಿದರು.