ಜಿಲ್ಲೆ

ರಕ್ತದಾನ ಶ್ರೇಷ್ಠ ಕೊಡುಗೆ

Avinash R

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕೃತಕವಾಗಿ ನಿರ್ಮಾಣ ಮಾಡಲು ಸಾಧ್ಯವಾಗದ ವಸ್ತು ರಕ್ತ. ಇದನ್ನು ಪರಸ್ಪರ ನೀಡುವುದು ಅನಿವಾರ್ಯವಾಗಿದೆ. ಆದುದರಿಂದ ರಕ್ತ ನೀಡುವ ಉತ್ತಮ ಮನಸ್ಸು ಸರ್ವರಲ್ಲಿ ಮೂಡಬೇಕು. ಪರರ ಆರೋಗ್ಯ ಸಮೃದ್ಧಿಗೆ ನೀಡುವ ಶ್ರೇಷ್ಠ ಕೊಡುಗೆ ರಕ್ತದಾನವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗವರ್ನರ್ ಪಿ.ಬಿ.ಸುಧಾಕರ ರೈ ಹೇಳಿದರು.

ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಎಸ್‌ಎಸ್‌ಪಿಯು ಕಾಲೇಜು ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸುಳ್ಯ ಆಶ್ರಯದಲ್ಲಿ ಮತ್ತು ಸುಬ್ರಹ್ಮಣ್ಯ ಗ್ರಾಪಂ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಉಪಾಧ್ಯಕ್ಷ ವಿಷ್ಣು ಪಾತಿಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್., ಯುವ ರೆಡ್‌ಕ್ರಾಸ್‌ನ ಕೌನ್ಸಿಲರ್ ಶ್ರುತಿ ಅಶ್ವತ್, ಜೂನಿಯರ್ ರೆಡ್ ಕ್ರಾಸ್ ನಾಯಕ ಬಿಪಿನ್, ನಾಯಕಿ ನವ್ಯಶ್ರೀ ಉಪಸ್ಥಿತರಿದ್ದರು.