ಜಿಲ್ಲೆ

ರಕ್ತದಾನ ಮಹಾದಾನ

ಗಿರೀಶ ಸಗರ

ವಿಜಯಪುರ : ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದ ಶ್ರೇಯಸ್ಸು ನಮ್ಮದಾಗಲಿದೆ ಎಂದು ಉದ್ಯಮಿ ರಾಜು ಲೋಣಿ ಹೇಳಿದರು.ಗಣೇಶ ಚತುರ್ಥಿ ಅಂಗವಾಗಿ ನಗರದ ಜೋರಾಪುರ ಪೇಟೆಯ ಶಂಕರಲಿಂಗ ಗಜಾನನ ತರುಣ ಮಂಡಳದ ಸಂಕಲ್ಪ ಸಿದ್ಧಿ ಗಣಪತಿ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್​ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಇಲ್ಲಿನ ಗಜಾನನ ಮಂಡಳಿ ವತಿಯಿಂದ ಹಬ್ಬದ ಅಂಗವಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾನೀಯ ಎಂದರು.

ಅತಿಥಿ ದೊಡ್ಡಪ್ಪ ಹೇರಲಗಿ ಮಾತನಾಡಿ, ಹಬ್ಬದ ದಿನದಲ್ಲಿ ಏಳು ದಿನಗಳ ಕಾಲ ಅನ್ನಪ್ರಸಾದ, ಆರೋಗ್ಯ ಉಚಿತ ತಪಾಸಣೆ ಶಿಬಿರ, ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಮಂಡಳಿಯ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ ಎಂದು.

ಮಂಡಳಿಯ ಉಸ್ತುವಾರಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿದರು. ಹಿರಿಯರಾದ ಪವಾಡಪ್ಪ ಗಿಡವೀರ, ಮಲ್ಲಿಕಾರ್ಜುನ ಹೇರಲಗಿ, ಸಂಪತ ಕುರ್ಲೆ ವೇದಿಕೆಯಲ್ಲಿದ್ದರು.ಸೂರಪ್ಪ ಮಿರ್ಜಿ, ವಿರುಪಾಪ್ಪ ಶಾಬಾದಿ , ಶಂಕರ ಹೇರಲಗಿ, ಈರಪ್ಪ ಕುರ್ಲೆ, ಅನಂತ ಗಿಡವೀರ, ಹುಚ್ಚಪ್ಪ ಕವಿಶೆಟ್ಟಿ, ಆಶಿಶ ಹುಣಶ್ಯಾಳ, ಅಮಿತ ಕುರ್ಲೆ, ಧನಂಜಯ ಶಾಪುರ, ನಾಗರಾಜ್​ ಮಟ್ಟಿಕಲಿ, ಮೋಹನ ಹೇರಲಗಿ, ದಾನಪ್ಪ ಕುರ್ಲೆ, ಸುರೇಶ ಅಳಗುಂಡಗಿ, ಪ್ರಶಾಂತ ಕವಿಶೆಟ್ಟಿ, ಸಂತೋಷ ಹುಣಶ್ಯಾಳ, ಶಿವಾನಂದ ಗಿಡವೀರ, ವಿರುಪಾ ಬಾಗಲಕೋಟ, ನಿಖಿಲ್​ ಕವಿಶೆಟ್ಟಿ, ವಿಲಾಸ ಬಿದರಿ, ವಿಶ್ವ ಹೇರಲಗಿ, ಅಪ್ಪು ಮಟ್ಯಾಳ ಮತ್ತಿತರರಿದ್ದರು.

ವಿಜಯಪುರದ ಜೋರಾಪುರ ಪೇಟೆಯ ಶಂಕರಲಿಂಗ ಗಜಾನನ ತರುಣ ಮಂಡಳದ ಸಂಕಲ್ಪ ಸಿದ್ಧಿ ಗಣಪತಿ ಸಮಿತಿ ವತಿಯಿಂದ ಬೃಹತ್​ ರಕ್ತದಾನ ಶಿಬಿರ ನಡೆಯಿತು. ಶಿವರುದ್ರ ಬಾಗಲಕೋಟೆ, ರಾಜು ಲೋಣಿ, ದೊಡ್ಡಪ್ಪ ಹೇರಲಗಿ ಮತ್ತಿತರರಿದ್ದಾರೆ.