ಜಿಲ್ಲೆ

ಸಕ್ರಿ ಕಾನೂನು ಕಾಲೇಜಿನಲ್ಲಿ ರಕ್ತದಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಎನ್ಎಸ್ಎಸ್ ಮತ್ತು ರೊಡ್ ಕ್ರಾಸ್ ಘಟಕ, ಮಂಜುನಾಥೇಶ್ವರ ವಾಣಿಜ್ಯ ಮಹಾವಿದ್ಯಾಲಯ ಹಾಗೂ ರಾಷ್ಟ್ರೋತ್ಥಾನ ರಕ್ತ ಭಂಡಾರ ಇವರ ಸಹಯೋಗದಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ರಾಷ್ಟ್ರೋತ್ಥಾನ ರಕ್ತ ಭಂಡಾರ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಜಗತ್ತಿನಲ್ಲಿ ಅನೇಕ ಅನ್ವೇಷಣೆಗಳು ಆಗಿವೆ. ಆದರೆ, ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಒಬ್ಬರು ರಕ್ತದಾನ ಮಾಡಿದರೆ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರೆಯುತ್ತದೆ. ರಕ್ತದಾನಿಗೂ ಲಾಭವಾಗುತ್ತದೆ. ಮುಖ್ಯವಾಗಿ ರಕ್ತದ ಕೊಬ್ಬಿನಾಂಶ ಗಣನೀಯವಾಗಿ ಕಡಿಮೆಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ ಮಾತನಾಡಿ, ಇಂಥ ರಕ್ತದಾನ ಶಿಬಿರಗಳು ಆರೋಗ್ಯ ಹಾಗೂ ಸಾಮಾಜಿಕ ಸೇವಾ ಕಾರ್ಯದಲ್ಲಿ ಪ್ರಮುಖವಾಗಿವೆ ಎಂದು ತಿಳಿಸಿದರು.

ಡಾ. ನವೀನ, ಹಳ್ಯಾಳ, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಸಾಜೀದ್ ಹುಸೇನ್, ಪ್ರೊ. ಬಾಬುಲಾಲ ದರಗದ, ಡಾ. ದೀಪಾ ಪಾಟೀಲ, ಸಂಯೋಜಕರಾದ ಪ್ರೊ. ಪೂರ್ಣಿಮಾ ಕುರ್ಡಿಕೇರಿ, ಎನ್ಎನ್ಎಸ್ ಅಧಿಕಾರಿ ಸುರೇಶ ಲಿಂಬಿಕಾಯಿ ಉಪಸ್ಥಿತರಿದ್ದರು.

24 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಭಾಗ್ಯಶ್ರೀ ಭಟ್ ನಿರೂಪಿಸಿದರು. ಮಮತಾ ಕಲಾಲ ಪ್ರಾರ್ಥನೆ ಹಾಡಿದರು.