ಮುಂಡರಗಿ: ಮಾನವ ಆರೋಗ್ಯದಿಂದ ಇದ್ದಾಗ ಮಾತ್ರ ಏನನ್ನಾದರು ಸಾಧಿಸಬಲ್ಲ. ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ಸಿಇಒ ಸಿಕಂದರ್ ಮೀರಾ ನಾಯಕ ಹೇಳಿದರು.
ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಜಗದ್ಗುರು ಅನ್ನದಾನೀಶ್ವರ ಮಠದ ಆವರಣದಲ್ಲಿ ಎಸ್‌ಬಿಐ ಫೌಂಡೇಶನ್ ಮತ್ತು ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಯುವಕರು ರಕ್ತದಾನ ಮಾಡಿದ್ದರಿಂದ ಹಲವಾರು ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದರು.
ಡಾ.ದತ್ತಾತ್ರೇಯ ವೈಕುಂಠ ಮಾತನಾಡಿ, ಭಾರತದಲ್ಲಿ ಪ್ರತಿ 2 ಸೆಂಕೆಡಿಗೆ ಒಬ್ಬರಿಗೆ ರಕ್ತದ ಅಗತ್ಯ ಉಂಟಾಗುತ್ತದೆ. ಪ್ರತಿವರ್ಷ ಸರಾಸರಿ 5 ಕೋಟಿ ಯುನಿಟ್‌ಗೂ ಹೆಚ್ಚು ರಕ್ತ ಬೇಕಾಗುತ್ತದೆ. ಆದರೆ, ಸಂಗ್ರಹವಾಗುವುದು 2.5 ಕೋಟಿ ಯುನಿಟ್ ಮಾತ್ರ. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತದ ಉತ್ಪತ್ತಿಯಾಗುತ್ತದೆ. ಅಲ್ಲದೆ, ಹೃದಾಯಾಘಾತಗಳು ಸಂಭವಿಸುವುದಿಲ್ಲ ಎಂದರು.
ವೆಂಕಟಾಪುರ ಗ್ರಾಮದಲ್ಲಿ 25ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಬಸವರಾಜ ಹಳ್ಳಿ, ಹಣಮಂತಪ್ಪ ಮರಿಗೌಡ್ರ, ಕುಬೇರಪ್ಪ ಬಿಸನಳ್ಳಿ, ಬಸವರಾಜ ತುಪ್ಪದ, ಭೀಮಪ್ಪ ಸಂಶಿ, ಬಸವರಾಜ ಎಸ್, ಮಂಜುನಾಥ ಕೆ, ವಿರೂಪಾಕ್ಷಪ್ಪ, ಕಲ್ಲಪ್ಪ ಎಸ್.ಕೆ, ಹುಸೇನಸಾಬ್ ಎನ್, ಗೋಣೆಪ್ಪ ಟಿ, ಸಂಗಪ್ಪ ಎ, ಮುತ್ತಪ್ಪ ಬಿ, ಶಿವಕುಮಾರ, ಪಾರಪ್ಪ ಕೆ, ವಿರೂಪಾಕ್ಷಗೌಡ, ಶರಣಪ್ಪ, ಕುಬೇರಪ್ಪ, ಶಿಕಂದರ, ಮುತ್ತಪ್ಪ ಆರ್, ಮಂಜುನಾಥ, ಶಿವಾನಂದ, ಸಿದ್ಧಪ್ಪ, ವಿ.ಎಸ್. ಅರ್ಕಸಾಲಿ, ಬಸವರಾಜ, ಮಂಜಪ್ಪ ಇತರರು ಇದ್ದರು.