ಜಿಲ್ಲೆ

60ಕ್ಕೂ ಹೆಚ್ಚು ಜನರಿಂದ ರಕ್ತದಾನ

ಮರಿದೇವ ಹೂಗಾರ

ಹುಬ್ಬಳ್ಳಿ: ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಬಿಎನ್‌ಐ ಮಿಲಿಯನೇರ್ ಹಾಗೂ ರಾಷ್ಟ್ರೋತ್ಥಾನ ರಕ್ತ ಭಂಡಾರ ಸಹಯೋಗದಲ್ಲಿ ಇಲ್ಲಿಯ ಕಾಟನ್ ಕಂಟ್ರಿ ಕ್ಲಬ್‌ನಲ್ಲಿ ಬುಧವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

60ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ರಾಷ್ಟ್ರೋತ್ತಾನ ರಕ್ತ ಭಂಡಾರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಬಿಎನ್‌ಐ ಮಿಲಿಯನೇರ್ ಅಧ್ಯಕ್ಷ ವಿಜಯ ಮಟ್ಟಿ, ಉಪಾಧ್ಯಕ್ಷ ಸೌರಭ ಧರಣೆಪ್ಪನವರ, ಕಾರ್ಯದರ್ಶಿ ಶೀತಲ್‌ಕುಮಾರ ಬೀಳಗಿ, ಕಾರ್ಯನಿರ್ವಾಹಕ ನಿರ್ದೇಶಕ ಶ್ರೇಯಸ್ ನಾಡಕರ್ಣಿ, ನಿಮಿಷಾ ಕಾಮತ್ ನಾಡಕರ್ಣಿ, ಬೀರಪ್ಪ ಕುರಿ, ಇತರರು ಇದ್ದರು.