ಜಿಲ್ಲೆ

76 ಜನರಿಂದ ರಕ್ತದಾನ

ಮರಿದೇವ ಹೂಗಾರ

ಹುಬ್ಬಳ್ಳಿ: ಗಣರಾಜ್ಯೋತ್ಸವ ನಿಮಿತ್ತ ಇಲ್ಲಿಯ ಕೆಎಂಸಿಆರ್‌ಐನಲ್ಲಿ 76 ಜನ ವೈದ್ಯಕೀಯ ಸಿಬ್ಬಂದಿ ಭಾನುವಾರ ರಕ್ತದಾನ ಮಾಡಿದರು.

ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ನಡೆದ ರಕ್ತದಾನ ಶಿಬಿರದಲ್ಲಿ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಸಮೇತ ಇತರ ವೈದ್ಯಕೀಯ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಇತರರಿಗೆ ಮಾದರಿಯಾದರು.

ಪ್ರಾಚಾರ್ಯ ಡಾ.ಗುರುಶಾಂತಪ್ಪ ಯಲಗಚ್ಚಿನ, ಡಾ. ರಾಜಶೇಖರ ದ್ಯಾಬೇರಿ, ಡಾ. ರಾಜಶೇಖರ ದುಂಡರಡ್ಡಿ, ಡಾ. ಸುರೇಶ ಹುಚ್ಚಣ್ಣವರ, ಡಾ. ಕವಿತಾ ಏವೂರ, ಡಾ. ಶಿಲ್ಪಾ ಹುಚ್ಚಣ್ಣವರ, ಡಾ. ದೀಪಿಕಾ ಇತರರು ಇದ್ದರು.