ಸಂಡೂರು ತಾಲೂಕಿನ ಹಿರೇಕೆರೆಯಾಗಿನಹಳ್ಳಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಯೋಜನಾಧಿಕಾರಿ ಡಾ.ಕೆ.ಜಿ.ಸುಮಾ, ಡಾ.ವಿ.ಚೌಡಪ್ಪ, ಉಪನ್ಯಾಸಕರಾದ ಲಕ್ಷ್ಮಣ್ ತೊಳಿ, ಡಾ.ಜಿ.ಹನುಮಂತ ಇತರರಿದ್ದರು. 
ಜಿಲ್ಲೆ

38 ಜನರಿಂದ ರಕ್ತದಾನ

ಗಾಯತ್ರಿ ಮಾಲಿಪಾಟೀಲ್

ಸಂಡೂರು: ಹಿರೇಕೆರೆಯಾಗಿನಹಳ್ಳಿಯಲ್ಲಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಮಂಗಳವಾರ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಆಸ್ಪತ್ರೆ ಸಂಡೂರು, ಎನ್‌ಎಂಡಿಸಿ ಸಂಚಾರಿ ಆರೋಗ್ಯ ಘಟಕದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. 122 ಜನರಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಔಷಧ ವಿತರಿಸಲಾಯಿತು. 38 ಜನ ರಕ್ತದಾನ ಮಾಡಿದರು. ಯೋಜನಾಧಿಕಾರಿಗಳಾದ ಡಾ.ಕೆ.ಜಿ.ಸುಮಾ, ಡಾ.ವಿ.ಚೌಡಪ್ಪ, ಉಪನ್ಯಾಸಕರಾದ ಲಕ್ಷ್ಮಣ್ ತೊಳಿ, ಡಾ.ಜಿ.ಹನುಮಂತ ಇತರರಿದ್ದರು.