ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ್ಯೋತ್ಸವ ನಿಮಿತ್ತ ನಗರದ ಜನನಿ ಪ್ರತಿಷ್ಠಾನ, ವೀರ ಸಾವರಕರ ಬಳಗ ಹಾಗೂ ರಾಷ್ಟ್ರೊತ್ಥಾನ ರಕ್ತನಿಧಿ ವತಿಯಿಂದ ಆ. 15ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಇಲ್ಲಿನ ಮಾಳಮಡ್ಡಿಯ ಕೆ.ಇ. ಬೋರ್ಡ್ ಶಾಲೆ (ಎಸ್ಬಿಐ ಬ್ಯಾಂಕ್ ಹಿಂಭಾಗ) ಬಳಿ ಬೆಳಗ್ಗೆ 10.30ಕ್ಕೆ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.