ತರೀಕೆರೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 65ನೇ ಬಾರಿ ರಕ್ತದಾನ ಮಾಡಿದ ಪುರಸಭೆ ಮಾಜಿ ಸದಸ್ಯ ಟಿ.ವಿ.ಶ್ರೀನಿವಾಸ್‌ಗೆ ಎಸಿ ಡಾ.ಕೆ.ಜೆ.ಕಾಂತರಾಜ್ ಪ್ರಶಂಸನಾ ಪತ್ರ ವಿತರಿಸಿದರು. ಪರಮೇಶ್, ಟಿ.ದಾದಾಪೀರ್, ಶಮಿವುಲ್ಲಾ ಷರ್ೀ ಇತರರಿದ್ದರು. 
ಜಿಲ್ಲೆ

ಸೌರ್ಹಾದತೆ ಹೆಚ್ಚಿಸುವ ರಕ್ತದಾನ ಶಿಬಿರ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ:ಇಸ್ಲಾಂ ಧರ್ಮದಲ್ಲಿ ದಾನ ಅತ್ಯಂತ ಶ್ರೇಷ್ಠತೆ ಹೊಂದಿದ್ದು, ಮುಸ್ಲಿಮರು ರಕ್ತದಾನ ಮಾಡುವ ಮೂಲಕ ಪ್ರವಾದಿ ಮಹಮ್ಮದ್ ಫೈಗಂಬರ್ ಅವರ ಸಮಾಜಮುಖಿ ಆಶಯವನ್ನು ಎತ್ತಿ ಹಿಡಿರುವುದು ಶ್ಲಾಘನೀಯ ಎಂದು ಎಸಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.
ಖಾಜಿ ಬೀದಿಯಲ್ಲಿರುವ ಆರೋಗ್ಯ ಕ್ಷೇಮ ಉಪ ಕೇಂದ್ರದಲ್ಲಿ ಶನಿವಾರ ಈದ್‌ಮಿಲಾದ್ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತ ಅತ್ಯಮೂಲ್ಯ ಮಾತ್ರವಲ್ಲ, ಅತ್ಯಂತ ಅವಶ್ಯಕವಾಗಿದೆ. ಹನಿ ರಕ್ತವೂ ಅನಿವಾರ್ಯ ಸಂದರ್ಭಗಳಲ್ಲಿ ಜೀವದಾತುವಿನಂತೆ ಕೆಲಸ ಮಾಡಲಿದೆ. ಇಂಥ ಶಿಬಿರಗಳನ್ನು ಹೆಚ್ಚು ಆಯೋಜಿಸುವುದರಿಂದ ರಕ್ತದ ಕೊರತೆ ನಿವಾರಿಸಲು ಸಾಧ್ಯವಾಗಲಿದೆ. ಯುವಕರು ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಪರಮೇಶ್ ಮಾತನಾಡಿ, ಇಂಥ ರಕ್ತದಾನ ಶಿಬಿರಗಳು ಸಮಾಜದಲ್ಲಿ ಸೌರ್ಹಾದತೆ ಹೆಚ್ಚಿಸುತ್ತದೆ. ಮನುಷ್ಯನ ಜಾತಿ ಧರ್ಮ ಬೇರೆಯಾದರೂ ರಕ್ತದ ಗುಣ ಮತ್ತು ಬಣ್ಣ ಒಂದೇ ಆಗಿದೆ ಎಂದು ಹೇಳಿದರು.
ಸದಸ್ಯ ಟಿ.ದಾದಾಪೀರ್ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚು ಆಯೋಜನೆಗೊಳ್ಳಬೇಕಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ನಿಧಿಯಿಂದ ಅಗತ್ಯ ಗುಂಪಿನ ರಕ್ತ ಪೂರೈಕೆ ಮಾಡಲಾಗುತ್ತಿದೆ. ಯುವಕರು ಇಂಥ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ರಕ್ತ ನಿಧಿ ಕೇಂದ್ರದ ವೈದ್ಯ ಡಾ.ರಜತ್, ಕ್ಷೇಮ ಕೇಂದ್ರದ ಸಂತೋಷ್, ಪುರಸಭೆ ಮಾಜಿ ಸದಸ್ಯರಾದ ಟಿ.ವಿ.ಶ್ರೀನಿವಾಸ್, ಟಿ.ಜಿ.ಸದಾನಂದ್, ಶಮಿವುಲ್ಲಾ ಷರ್ೀ, ಶಬ್ಬೀರ್ ಅಹಮದ್, ಅಬ್ದುಲ್‌ಹಕ್, ಾರೂಕ್, ಮುನಾವರ್, ಅಮೀರ್ ಜಾನ್, ಇರ್ಷಾದ್‌ಪಾಷಾ ಮತ್ತಿತರರಿದ್ದರು.