ಜಿಲ್ಲೆ

ಸೆ.26ರಂದು ನಗರದಲ್ಲಿ ರಕ್ತದಾನ ಶಿಬಿರ: ಪರಿಷತ್ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್ ಜೈನ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಖಿಲ ಭಾರತೀಯ ತೇರಾ ಪಂಥ್ ಯುವಕರ ಪರಿಷತ್ ವತಿಯಿಂದ ಸೆ.26ರಂದು ನಗರದ ಕಾಮನಗುಡಿ ವೃತ್ತದ ಬಳಿಯ ತೇರಾಪಂಥ್ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್ ಜೈನ್ ತಿಳಿಸಿದರು.

2012ರಲ್ಲಿ ಆರಂಭವಾದ ಪರಿಷತ್ ವಿಶ್ವದಾದ್ಯಂತ 354 ಶಾಖೆಗಳನ್ನು ಹೊಂದಿದೆ. ಕಳೆದ ವರ್ಷ ಮಂಡ್ಯದ ಶಿಬಿರವೊಂದರಲ್ಲೇ 402 ಯೂನಿಟ್ ರಕ್ತ ಸಂಗ್ರಹಿಸಿ ಮಿಮ್ಸ್ ಆಸ್ಪತ್ರೆಗೆ ನೀಡಲಾಗಿತ್ತು. ಈ ವರ್ಷ 600 ರಿಂದ 650 ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ರವರೆಗೆ ಶಿಬಿರ ನಡೆಯಲಿದ್ದು, ಸಂಘ ಸಂಸ್ಥೆಗಳನ್ನು ರಕ್ತದ ಮೂಲಕ ಒಂದುಗೂಡಿಸುವುದಾಗಿದೆ. ರಕ್ತದಾನದ ಅಮೃತ ಸ್ಮರಣೋತ್ಸವದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ಉಳಿಸಲು ನೆರವಾಗಬೇಕೆಂದು ಕೋರಿದರು.

ಪರಿಷತ್‌ನ ಪದಾಧಿಕಾರಿಗಳಾದ ಕಮಲೇಶ್ ಜೈನ್, ರಾಕೇಶ್ ಬನ್ಸಾಲಿ, ನೇಮಿಚಂದ್, ಪ್ರಸಾದ್ ಬನ್ಸಾಲಿ, ಪ್ರದೀಪ್ ಬನ್ಸಾಲಿ ಉಪಸ್ಥಿತರಿದ್ದರು.