ಜಿಲ್ಲೆ

ನಿಸ್ವಾರ್ಥ ಸೇವೆಯಿಂದ ಮಾನವ ಬದುಕಿಗೆ ಅರ್ಥ: ಸಂಜೀವ ನಾಕ್ ಅಭಿಮತ

ಸೌಮ್ಯ ಆರ್

ಕಡಬ: ರಾಷ್ಟ್ರ ಪ್ರೇಮ ಮತ್ತು ಸೇವೆ ಎನ್ನುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಲ್ಲಿ ರಕ್ತಗತವಾಗಿದೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆಯಿಂದ ಮಾನವ ಬದುಕಿಗೆ ಅರ್ಥ ಬರಲು ಸಾಧ್ಯ ಎಂದು ಆರೆಸ್ಸೆಸ್ ಹಿರಿಯ ಸ್ವಯಂಸೇವಕ ಸಂಜೀವ ನಾಕ್ ಕೊಠಾರಿ ಹೇಳಿದರು.

ಅಯೋಧ್ಯಾ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಯಲ್ಲಿ ಹುತಾತ್ಮರಾದವರನ್ನು ಸ್ಮರಿಸುವ ಸಲುವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ನೇತೃತ್ವದಲ್ಲಿ, ಕಡಬದ ಸರಸ್ವತಿ ವಿದ್ಯಾಲಯ ಸಹಯೋಗದಲ್ಲಿ ಮಂಗಳೂರಿನ ವೆನ್‌ಲಾಕ್ ಬ್ಲಡ್ ಬ್ಯಾಂಕ್‌ನ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕ ಬಾಲಕೃಷ್ಣ ರೈ ಕೆ.ಅಧ್ಯಕ್ಞತೆ ವಹಿಸಿದ್ದರು. ವೆನ್‌ಲಾಕ್ ಬ್ಲಡ್ ಬ್ಯಾಂಕ್‌ನ ತಾಂತ್ರಿಕ ಮೇಲ್ವಿಚಾರಕ ಅಶೋಕ್ ಕುಮಾರ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣ ಶೆಟ್ಟಿ ಕಡಬ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮಂಕುಡೆ ವೆಂಕಟ್ರಮಣ ರಾವ್, ವಿಹಿಂಪ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಮಾತೃಶಕ್ತಿ ಸಂಯೋಜಕಿ ಪ್ರೇಮಲತಾ ವಾಸುದೇವ ಕೇಪುಂಜ, ಯುವ ಕೃಷಿಕ ಅಕ್ಷಯ್ ಕುಮಾರ್ ಕೂರಾಟ ನೂಜಿಬಾಳ್ತಿಲ, ಸಾಮಾಜಿಕ ಕಾರ್ಯಕರ್ತೆ ವಿದ್ಯಾ ನಾಯಕ್ ಕುಂಟೋಡಿ, ಬ್ಲಡ್ ಬ್ಯಾಂಕ್‌ನ ವೈದ್ಯೆ ಡಾ.ಬರ್ಣನಾ, ಕಡಬ ಸರಸ್ವತಿ ವಿದ್ಯಾಲಯದ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

ವಿಹಿಂಪ ಕಡಬ ಪ್ರಖಂಡದ ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಸ್ವಾಗತಿಸಿದರು. ಶಿಕ್ಷಕ ವಸಂತ ಕರುಂಬೋಡಿ ನಿರೂಪಿಸಿದರು. ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಮುಖ್ಯಶಿಕ್ಷಕಿ ಶೈಲಶ್ರೀ ರೈ ಎಸ್.ವಂದಿಸಿದರು.