ಜಿಲ್ಲೆ

ಮೋದಿ ಜನ್ಮದಿನದ‌ ಅಂಗವಾಗಿ ಯಾದವಾಡದಲ್ಲಿ ರಕ್ತದಾನ ಶಿಬಿರ

ಧಾರವಾಡ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಧಾರವಾಡ ಗ್ರಾಮೀಣ -71 ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲೂಕಿನ ಯಾದವಾಡ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಯಶಸ್ವಿಯಾಯಿತು.

ಗ್ರಾಮದ ಯುವಕರು ಹಾಗೂ ಪಕ್ಷದ ಮುಖಂಡರುಗಳು ಸೇರಿದಂತೆ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ವತಿಯಿಂದ ದಾನವಾದ ರಕ್ತವನ್ನು ಸಂಗ್ರಹ ಮಾಡಲಾಯಿತು. ಪ್ರೀತಿಯ ಪಾರಿವಾಳ ಖ್ಯಾತಿಯ ಗಾಯಕ ರಮೇಶ ಕುರುಬಗಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಗುಂಡಗೋವಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಮೃತ್ಯುಂಜಯ ಹಿರೇಮಠ, ಪಕ್ಷದ ಪ್ರಮುಖರಾದ ಜಯತೀರ್ಥ ಕಟ್ಟಿ, ಮಂಡಲ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ಶಶಿಮೌಳಿ ಕುಲಕರ್ಣಿ, ವಿಠ್ಠಲ ಪೂಜಾರ, ಯಲ್ಲಪ್ಪ ಜಕನವರ, ವೀರಯ್ಯ ಚಿಕ್ಕಮಠ, ರೈತ ಮೋರ್ಚ ಅದ್ಯಕ್ಷ ಮಹಾದೇವ ದಂಡಿನ, ಎಸ್ಸಿ ಮೋರ್ಚ ಅಧ್ಯಕ್ಷ ಪರಮೇಶ್ವರ ಮಾದರ, ಎಸ್ಟಿ ಮೋರ್ಚ ಅದ್ಯಕ್ಷ ಅಜ್ಜಪ್ಪ ಜಂಗಲಿ, ಮಹಿಳಾ ಮೋರ್ಚ ಅದ್ಯಕ್ಷರಾದ ಲಕ್ಷ್ಮೀ ಕಾಶಿಗಾರ್, ನಾಗರಾಜ ಲಂಗೋಟಿ ಹಾಗೂ ಯಾದವಾಡ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಹಿರಿಯರಿದ್ದರು.