Blood donation camp for Nurses' Day 
ಜಿಲ್ಲೆ

ಶುಶ್ರೂಷಾಧಿಕಾರಿಗಳ ದಿನಾಚರಣೆಗೆ ರಕ್ತದಾನ ಶಿಬಿರ

Vijayapura - Desk - Doddanagouda Gudihindin

ಜಮಖಂಡಿ : ಅಂತಾರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಶುಶ್ರೂಷಾಧಿಕಾರಿಗಳ ತಾಲೂಕು ಸಂಘದ ಆಶ್ರಯದಲ್ಲಿ ಮೇ 9 ಮತ್ತು 12ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕಾಧ್ಯಕ್ಷ ಜೆ.ಡಿ. ದನ್ನೂರ ತಿಳಿಸಿದರು.

ನಗರದ ಕಾನಿಪ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 9 ರಂದು ಬೆಳಗ್ಗೆ 9 ಗಂಟೆಗೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಭಾ ಭವನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಆಸ್ಪತ್ರೆಯ 40 ರಿಂದ 50 ಜನ ಸಿಬ್ಬಂದಿ ರಕ್ತದಾನ ಮಾಡಲಿದ್ದಾರೆ. ಜಿಲ್ಲಾ ರಕ್ತ ಬಂಡಾರದ ಸಿಬ್ಬಂದಿ ರಕ್ತ ಪಡೆದುಕೊಂಡು, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.

ಮೇ 12 ರಂದು ಬೆಳಗ್ಗೆ 9 ಗಂಟೆಗೆ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಅಂತಾರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ವಿ.ಸಿ. ಮುದಿಗೌಡರ ಅಧ್ಯಕ್ಷತೆ ವಹಿಸುವರು.

ನಿವೃತ್ತ ಶಸಚಿಕಿತ್ಸಕರು ಡಾ. ಎಂ.ಆರ್. ಹುಂಡೇಕಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಸಂಘದ ಜಿಲ್ಲಾಧ್ಯಕ್ಷ ಶೇಖರ ಕೋಲಕಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಘದ ಗೌರವಾಧ್ಯಕ್ಷ ಲಕ್ಷ್ಮೀಬಾಯಿ ನೀಲನಾಯಕ ಉಪಸ್ಥಿತರಿರುವರು ಎಂದರು. ಬಾಗಣ್ಣ ನಾಗಠಾಣ, ವಿಶ್ವನಾಥ ಕಲ್ಯಾಣಿ, ಬೀರಪ್ಪ ಇಟ್ಟಣ್ಣವರ ಮತ್ತಿತರರಿದ್ದರು.