ಜಿಲ್ಲೆ

ಎನ್‌ಎಸ್‌ಯುಐನಿಂದ ರಕ್ತದಾನ ಶಿಬಿರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಜಿಲ್ಲಾ ಕಾಂಗ್ರೆಸ್ ಎನ್‌ಎಸ್‌ಯುಐ ಘಟಕದಿಂದ ಬುಧವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಎನ್ ಎಸ್ ಯು ಐ ಘಟಕದ ಅಧ್ಯಕ್ಷ ರಾಶಿದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ, ಎಸ್ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ್, ಬ್ಲಡ್ ಬ್ಯಾಂಕ್ ವೈದ್ಯ ಡಾ. ಕರುಂಬಯ್ಯ, ಸಮಾಜ ಸೇವಕರಾದ ವಿನ್ಸೆಂಟ್, ಸಮೀರ್ ಇದಾಯ್ತುಲ್ಲ, ಶಾಲೆಯ ಶಿಕ್ಷಕರಾದ ಸೌಮ್ಯಲತಾ ಮತ್ತಿತರರು ಇದ್ದರು.

ಈ ಸಂದರ್ಭ ಸಮಾಜ ಸೇವಕರಾದ ವಿನ್ಸೆಂಟ್ ಸಮೀರ್ ಇದಾಯ್ತುಲ್ಲ, ಹಾಗೂ ಬ್ಲಡ್ ಬ್ಯಾಂಕ್ ವೈದ್ಯ ಡಾ. ಕರಂಬಯ್ಯ ಅವರನ್ನು ಸನ್ಮಾನಿಸಲಾಯಿತು.