ಎಂಆರ್‌ಪಿಎಲ್ ಎಂಪ್ಲಾಯೀಸ್ ಯೂನಿಯನ್ (ಎಂಇಯು), ವೆನ್‌ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಸಹ ಪ್ರಾಯೋಜಕತ್ವದಲ್ಲಿ ಎಂಆರ್‌ಪಿಎಲ್ ಎಂಪ್ಲಾಯೀಸ್ ರಿಕ್ರಿಯೇಷನ್ ಸೆಂಟರ್ (ಎಂಇಆರ್‌ಸಿ)ನಲ್ಲಿ ರಕ್ತದಾನ ಶಿಬಿರ ನಡೆಯಿತು. 
ಜಿಲ್ಲೆ

ಎಂಆರ್‌ಪಿಎಲ್ ಎಂಪ್ಲಾಯಿಸ್ ಯೂನಿಯನ್‌ನಿಂದ ರಕ್ತದಾನ ಶಿಬಿರ

Mangaluru - Shravan Kumar Nala

ಮಂಗಳೂರು: ಎಂಆರ್‌ಪಿಎಲ್ ಎಂಪ್ಲಾಯೀಸ್ ಯೂನಿಯನ್ (ಎಂಇಯು), ವೆನ್‌ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಸಹ ಪ್ರಾಯೋಜಕತ್ವದಲ್ಲಿ ಎಂಆರ್‌ಪಿಎಲ್ ಎಂಪ್ಲಾಯೀಸ್ ರಿಕ್ರಿಯೇಷನ್ ಸೆಂಟರ್ (ಎಂಇಆರ್‌ಸಿ)ನಲ್ಲಿ ದಿವಂಗತ ಕ್ಯಾಪ್ಟನ್ ಎಂ.ವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ರಕ್ತದಾನ ಶಿಬಿರ ನಡೆಯಿತು.

ಎಂಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಯುತ್ತದೆ. ರಕ್ತದಾನ ಮಹಾದಾನ, ರಕ್ತದಾನ ಮಾಡಿದವರು ಶ್ರೇಷ್ಠರು. ರಕ್ತಗೂ ಕೂಡ ಭೇದ-ಭಾವ ಇಲ್ಲ. ರಕ್ತದಾನ ಮಾಡುದರಿಂದ ನಮ್ಮ ದೇಹದ ಅರೋಗ್ಯ ಮತ್ತು ನಮ್ಮ ಹೃದಯದ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ರಕ್ತದಾನ ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುತ್ತದೆ. ರಕ್ತದಾನದಂತಹ ಸೇವಾ ಕಾರ್ಯವನ್ನು ಮಾಡಿದರೆ ಅದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ರಕ್ತದಾನ ಜೀವ ಉಳಿಸುವ ಪುಣ್ಯಕಾರ್ಯವಾಗಿದ್ದು, ಆರೋಗ್ಯ ವೃದ್ಧಿಗೂ ಸಹಕಾರಿಯಾಗುತ್ತದೆ. ಸದೃಢ ವ್ಯಕ್ತಿ ರಕ್ತವನ್ನು ದಾನ ಮಾಡಿದರೆ, ಅಷ್ಟೇ ಅಂಶದಷ್ಟು ಹೊಸ ರಕ್ತವು ಎರಡು ತಿಂಗಳೊಳಗೆ ತುಂಬುವ ಮೂಲಕ ಇನ್ನಷ್ಟು ಚೈತನ್ಯ, ಉತ್ಸಾಹ ಬರುತ್ತದೆಂದು ಎಂದರು.

ಜನರಲ್ ಮ್ಯಾನೇಜರ್ ಸೌಮ್ಯ ಚಂದ್ರಕರ್, ಎಂಇಯು ಅಧ್ಯಕ್ಷ ಮುಖೇಶ್ ಬಿಎ, ವೆನ್ಲಾಕ್ ಬ್ಲಡ್ ಬ್ಯಾಂಕ್ ಪ್ರಭಾರಿ ಆಂಟನಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೈತ್ರಿ ಶೆಟ್ಟಿ, ಪ್ರಮುಖರಾದ ಯುವರಾಜ ಎಂಕೆ, ರಾಮದಾಸ್, ಗುರುರಾಜ್ ರಾವ್, ರೋಷನ್ ಪಿರೇರಾ ಮತ್ತು ತೀರ್ಥರಾಜ್ ಸೇರಿದಂತೆ ಹಲವರು ಇದ್ದರು.