ಜಿಲ್ಲೆ

ಕಾನೂನು ವಿವಿಯಲ್ಲಿ ರಕ್ತದಾನ ಶಿಬಿರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ :  ಅಂತಾರಾಷ್ಟ್ರೀಯ ರಕ್ತದಾನಿಗಳ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಂವೇಧನಾ-2 ಅಭಿಯಾನದಡಿ ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಂದು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕ ಐ.ಬಿ. ಬಿರಾದಾರ, ಎನ್​ಎಸ್​ಎಸ್​ ಸಂಯೋಜನಾಧಿಕಾರಿ ಮತ್ತು ವಿಶ್ವವಿದ್ಯಾಲಯದ ಅಭಿಯಂತರರ ವಿಭಾಗದ ಮುಖ್ಯಸ್ಥ ನಿರಂಜನ ಮಳಿಮಠ, ಆರ್​.ಎಂ. ಕುಲಕಣಿರ್, ಕರಾಕಾವಿಯ ಕಾನೂನು ಶಾಲೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀಲ ಬಾಗಡೆ, ಗಿರೀಶಗೌಡ ಪಾಟೀಲ, ಮೋಹನ ಆರ್​., ಡಾ. ಪ್ರಶಾಂತ ಎಡ್ರಾಮಿಮಠ, ಶೋಭಾ ಹೂಗಾರ, ಹನುಮಂತ ತಳವಾರ ಮತ್ತು ರಾಷ್ಟ್ರೊತ್ತಾನ ರಕ್ತ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ಕರಾಕಾವಿಯ ಕಾನೂನು ಶಾಲೆಯ ವಿದ್ಯಾಥಿರ್ಗಳು ಸೇರಿ ಅಂದಾಜು 1500 ಜನರು ಸ್ವಯಂ ಪ್ರೇರಣೆಯಿಂದ 173 ಯೂನಿಟ್​ ರಕ್ತದಾನ ಮಾಡಿದರು.