ಜಿಲ್ಲೆ

ಬಿಬಿಎ ಕಾಲೇಜಿನಲ್ಲಿ ರಕ್ತದಾನ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಸಿಎಸ್ಆರ್ ವೇದಿಕೆಯ ವತಿಯಿಂದ ಪ್ರೇಮಬಿಂದು ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ಮಂಗಳವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. 67 ವಿದ್ಯಾಥಿರ್ಗಳು ರಕ್ತದಾನ ಮಾಡಿದರು.

ಎಂ.ಎಂ. ಜೋಶೀ ನೇತ್ರ ವಿಜ್ಞಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳ ಕಣ್ಣುಗಳ ತಪಾಸಣೆ ನಡೆಸಲಾಯಿತು. ಡಾ. ಕೃಷ್ಣಪ್ರಸಾದ, ಡಾ. ಮಯೂರ ಪಿ.ಕೆ. ಅವರು ತಪಾಸಣೆ ನಡೆಸಿದರು.

ಅನೇಕ ವಿದ್ಯಾಥಿರ್ಗಳು ನೇತ್ರದಾನಕ್ಕೆ ವಾಗ್ದಾನ ಮಾಡಿದರು. ಪ್ರಾಚಾರ್ಯ ಪ್ರೊ. ರಮಾಕಾಂತ ವಿ.ಡಿ, ಹಾಗೂ ಡಾ. ಶೋಭಾ ಕ್ಯಾತನವರ ಕಾರ್ಯಕ್ರಮ ಸಂಟಿಸಿದ್ದರು.