ಜಿಲ್ಲೆ

ಬಗಂಬಿಲದಲ್ಲಿ ರಕ್ತದಾನ ಶಿಬಿರ

ಸೌಮ್ಯ ಆರ್

ಉಳ್ಳಾಲ: ಬಗಂಬಿಲ ಹಿಂದು ಯುವ ಸೇನೆ ಶ್ರೀ ಮಹಾದೇವಿ ಶಾಖೆ ಆಶ್ರಯದಲ್ಲಿ ಯೆನೆಪೋಯ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಬಗಂಬಿಲದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಹಿಂದು ಯುವ ಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಅಧ್ಯಕ್ಷ ಯಶೋಧರ ಚೌಟ ಅಧ್ಯಕ್ಷತೆ ವಹಿಸಿದ್ದರು. ಹಿಂದು ರಕ್ತನಿಧಿ ಸಂಚಾಲಕ ನಿಶಾಂತ್ ಜಪ್ಪಿನಮೊಗರು, ಕೋಟೆಕಾರ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಐ.ಬಗಂಬಿಲ, ದೀಕ್ಷಿತ್ ನಿಸರ್ಗ ಕುಂಪಲ, ಹಿಂದು ಯುವಸೇನೆ ಜಿಲ್ಲಾ ಕಾರ್ಯದರ್ಶಿ ರವಿ ಎಕ್ಕೂರು, ಮುಖಂಡ ವಿಕ್ರಂ ಚೌಟ, ಮಂಗಳೂರು ಗ್ರಾಮ ವಿಕಾಸ ಸದಸ್ಯ ರವಿಚಂದ್ರನ್ ಕುಂಪಲ, ಯೆನೆಪೋಯ ಆಸ್ಪತ್ರೆಯ ಡಾ.ದಿಲೀಪ್, ಶ್ರೀ ಮಹಾದೇವಿ ಮಂದಿರ ಅರ್ಚಕ ಬಾಲಕೃಷ್ಣ ಪೂಜಾರಿ ಬಗಂಬಿಲ, ಹಿಂದು ಯುವಸೇನೆ ಗೌರವಾಧ್ಯಕ್ಷ ಉದಯರಾಜ್ ಶೆಟ್ಟಿ, ಅಧ್ಯಕ್ಷ ರಾಜೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕರಣ್ ಬಗಂಬಿಲ ಸ್ವಾಗತಿಸಿದರು. ಗೋಪಾಲ ಕೃಷ್ಣರಾವ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.