ಜಿಲ್ಲೆ

ಸಂಘಟನೆಯಿಂದ ಸಮಾಜಮುಖಿ ಕಾರ್ಯ : ಹೇಮಲತಾ ಆರ್.ಸಾಲ್ಯಾನ್ ಮೆಚ್ಚುಗೆ

ಸೌಮ್ಯ ಆರ್

ಗುರುಪುರ: ವಾಮಂಜೂರು ಟೈಗರ್ಸ್ ವತಿಯಿಂದ ಎ.ಜೆ.ಆಸ್ಪತ್ರೆ ರಕ್ತನಿಧಿ ಸಹಯೋಗದಲ್ಲಿ ದಿ.ನವೀನ್ ಮಿಜಾರು 6ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಮೇ 25ರಂದು ವಾಮಂಜೂರಿನ ಶ್ರೀರಾಮ ಭಜನಾ ಮಂದಿರದಲ್ಲಿ ರಕ್ತದಾನ ಶಿಬಿರ ಮತ್ತು ಬರೆಯುವ ಪುಸ್ತಕ ಉಚಿತ ವಿತರಣೆ ಕಾರ್ಯಕ್ರಮ ನಡೆಯಿತು.

ಮನಪಾ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್ ಮಾತನಾಡಿ, ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತ ಬಂದಿರುವ ಟೈಗರ್ಸ್ ಸಂಘಟನೆಯು ಈ ಬಾರಿ ಕೈಗೊಂಡಿರುವ ರಕ್ತದಾನ ಶಿಬಿರ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹೆಚ್ಚು ಪ್ರಯೋಜನಕಾರಿ ಕಾರ್ಯಕ್ರಮ ಎಂದರು.

ತಿರುವೈಲು ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಗೋಪಾಲ್ ಯು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಶ್ಮಿತ್ ಡಿ.ಬಂಗೇರ ಅವರನ್ನು ಸನ್ಮಾನಿಸಲಾಯಿತು. ಹಿಂದು ಸಂಘಟನೆಯ ಮುಖಂಡ ಸಾಕ್ಷಾತ್ ಶೆಟ್ಟಿ, ವಾಮಂಜೂರು ಟೈಗರ್ಸ್ ಅಧ್ಯಕ್ಷ ಸುರೇಶ್, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ), ಎ.ಜೆ.ಆಸ್ಪತ್ರೆಯ ಡಾ.ಜಸ್ಪ್ರೀತ್, ದಿ.ನವೀನ್ ಮಿಜಾರು ಅವರ ಸಹೋದರರಾದ ಪ್ರವೀಣ್ ಮತ್ತು ಚೇತನ್, ಎಡಪದವು ಬಜರಂಗದಳದ ಮುಖಂಡ ಪ್ರದೀಪ್, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ಉದ್ಯಮಿ ರಘು ಸಾಲ್ಯಾನ್, ಟೈಗರ್ಸ್‌ನ ಪದಾಧಿಕಾರಿಗಳು ಮತ್ತು ಸದಸ್ಯರು, ವಿದ್ಯಾರ್ಥಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸ್ಥಳೀಯ 350 ಮಕ್ಕಳಿಗೆ ಬರೆಯುವ ಪುಸ್ತಕ ಉಚಿತ ವಿತರಿಸಲಾಯಿತು. 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ವಿಜೆ ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.