ಹನೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದರು. ಶಶಿಕುಮಾರ್, ಗ್ಲೋರಿಯಾ, ಗಗನ್, ಪುಷ್ಪಲತಾ ಇತರರಿದ್ದರು. 
ಜಿಲ್ಲೆ

ಜೀವ ಉಳಿಸಲು ರಕ್ತದಾನ ಪ್ರಯೋಜನಕಾರಿ

ಹನೂರು: ತುರ್ತು ಸಂದರ್ಭದಲ್ಲಿ ಮತ್ತೊಂದು ಜೀವವನ್ನು ಉಳಿಸಲು ರಕ್ತ ಅತ್ಯಂತ ಪ್ರಯೋಜನಕಾರಿ.ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನವನ್ನು ರೂಢಿಸಿಕೊಳ್ಳಬೇಕು ಎಂದು ಇನ್ಸ್‌ಪೆಕ್ಟರ್ ಶಶಿಕುಮಾರ್ ತಿಳಿಸಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾನುವಾರ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನ ಜೀವಗಳನ್ನು ಉಳಿಸಲು ಸಹಕಾರಿಯಾಗಿದೆ. ವೈದ್ಯಕೀಯ ಚಿಕಿತ್ಸೆಯನ್ನು ಬೆಂಬಲಿಸುತ್ತದೆ. ಒತ್ತಡ ಹಾಗೂ ಹೃದಯಾಘಾತವನ್ನು ಕಡಿಮೆಗೊಳಿಸುತ್ತದೆ. ರಕ್ತ ಕಣಗಳನ್ನು ಉತ್ಪಾದಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಬ್ಬಿಣದ ಮಟ್ಟವನ್ನು ಸಮತೋಲನಗೊಳಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಕೆಲವರು ರಕ್ತದಾನದಿಂದ ದೇಹ ದುರ್ಬಲಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಆದ್ದರಿಂದ ಈ ಭಾವನೆಯನ್ನು ತೊಡೆದುಹಾಕಿ ರಕ್ತದಾನ ಮಾಡಲು ಮುಂದಾಗಬೇಕು. ಇತರರನ್ನು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಗ್ಲೋರಿಯಾ, ಸಿಸ್ಟರ್ ಪ್ರಿಯಾಮಣಿ, ವೈದ್ಯ ಡಾ.ಗಗನ್, ಶಿಬಿರದ ಸಂಯೋಜಕಿ ಪುಷ್ಪಲತಾ, ಪಿಆರ್‌ಒ ರಾಚಯ್ಯ, ಶ್ರುಶೂಷಕಿ ಮಹಾದೇವಿ ಮತ್ತಿತರರು ಹಾಜರಿದ್ದರು.