ಕಡಬದ ವಿದ್ಯಾನಗರದಲ್ಲಿ ಸರಸ್ವತೀ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಗೋಪಾಲಕೃಷ್ಣ ಕೆದಿಲಾಯ, ರಾಮಕಷ್ಣ ರೈ ವಾಲೆಂಗ್ರಿ, ಚೇತನ್ ಬೊಳುವಾರು ಅವರನ್ನು ಸನ್ಮಾನಿಸಲಾಯಿತು.  
ಜಿಲ್ಲೆ

ರಕ್ತದಾನ ಜೀವದಾನಕ್ಕೆ ಸಮನಾದ ಪುಣ್ಯಕಾರ್ಯ: ಎಂ.ರಾಜಾರಾಮ ಭಟ್ ಹೊಸಮಠ ಅಭಿಮತ

ಕಡಬ:ರಕ್ತದಾನಎನ್ನುವುದು ಆರೋಗ್ಯವಂತರಾಗಿರುವಪ್ರತಿಯೊಬ್ಬರೂ ಮಾಡಬಹುದಾದಉತ್ತಮ ಕಾರ್ಯ.ಅದುಜೀವದಾನಕ್ಕೆ ಸಮನಾದುದು ಎಂದುಆರೆಸ್ಸೆಸ್ ಕಾರ್ಯಕರ್ತ ಎಂ.ರಾಜಾರಾಮಭಟ್ ಹೊಸಮಠ ಹೇಳಿದರು.
ವಿಶ್ವಹಿಂದು ಪರಿಷದ್,ಬಜರಂಗದಳ,ಮಾತೃಶಕ್ತಿ,ದುರ್ಗಾವಾಹಿನಿಕಡಬ ಪ್ರಖಂಡದ ನೇತೃತ್ವದಲ್ಲಿಮಂಗಳೂರಿನ ವೆನ್‌ಲಾಕ್ ಬ್ಲಡ್‌ಬ್ಯಾಂಕ್‌ನಸಹಕಾರದೊಂದಿಗೆ ಶ್ರೀರಾಮ ಜನ್ಮಭೂಮಿಅಯೋಧ್ಯೆಯಲ್ಲಿ ನಡೆದ ಕರಸೇವೆಸಂದರ್ಭದಲ್ಲಿ ಹುತಾತ್ಮರಾದಕರಸೇವಕರ ಸ್ಮರಣಾರ್ಥ ಕಡಬದವಿದ್ಯಾನಗರದಲ್ಲಿ ಸರಸ್ವತಿವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದರಕ್ತದಾನ ಶಿಬಿರದ ಉದ್ಘಾಟನಾಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಕೆದೇವಕಿ ಕೋಡಿಬೈಲು ಶಿಬಿರಉದ್ಘಾಟಿಸಿದರು.ವೆನ್‌ಲಾಕ್ಬ್ಲಡ್ ಬ್ಯಾಂಕ್ ಮೇಲ್ವಿಚಾರಕಆ್ಯಂಟನಿ,ಪುತ್ತೂರುವಿವೇಕಾನಂದ ವಿದ್ಯಾವಧರ್ಕ ಸಂಘದಸಹ ಕಾರ್ಯನಿರ್ವಹಣಾಧಿಕಾರಿಮಂಕುಡೆ ವೆಂಕಟ್ರಮಣ ರಾವ್,ಲೋಕೋಪಯೋಗಿಗುತ್ತಿಗೆದಾರ ಸತೀಶ್ ರೈ ಕರ್ಮೇಣ,ಕಡಬದಉದ್ಯಮಿ ದಯಾನಂದ ಆರಿಗ ಶುಭಹಾರೈಸಿದರು.
ಪುತ್ತೂರುವಿವೇಕಾನಂದ ವಿದ್ಯಾವಧರ್ಕ ಸಂಘದನಿರ್ದೇಶಕ ಕೃಷ್ಣ ಶೆಟ್ಟಿ ಕಡಬ,ನೆಟ್ಟಣದಉದ್ಯಮಿ ಪ್ರಕಾಶ್ ಕೆ.ಜಿ.,ಸರಸ್ವತಿವಿದ್ಯಾಲಯ ಸಂಚಾಲಕಿ ಸವಿತಾಶಿವಸುಬ್ರಹ್ಮಣ್ಯ ಭಟ್ ಪಾಜೋವು,ಸರಸ್ವತಿಆಂಗ್ಲ ಮಾಧ್ಯಮ ಶಾಲಾಧ್ಯಕ್ಷಸದಾಶಿವ ಭಟ್,ವಿಹಿಂಪಕಡಬ ಪ್ರಖಂಡದ ಗೌರವಾಧ್ಯಕ್ಷವಾಸುದೇವ ಭಟ್ ಕಡ್ಯ,ವಿಹಿಂಪಕಡಬ ಪ್ರಖಂಡದ ಅಧ್ಯಕ್ಷ ಶಿವರಾಮಶೆಟ್ಟಿ ಕೇಪು,ವೆನ್‌ಲಾಕ್ಬ್ಲಡ್ ಬ್ಯಾಂಕ್‌ನ ವೈದ್ಯೆಡಾ.ಮಾನ್ಯಮೊದಲಾದವರಿದ್ದರು.
ಬಜರಂಗದಳದಕಡಬ ಪ್ರಖಂಡದ ಸಂಯೋಜಕ ಅಶ್ವಿತ್ಕಂಡಿಗ ಸ್ವಾಗತಿಸಿದರು.ಸುಕೇಶ್ಹಳೆಸ್ಟೇಶನ್,ಶಿಕ್ಷಕಿಯರಾದಸೌಮ್ಯಾ ಕೆ.ಹಾಗೂವಿಶಾಲಾಕ್ಷಿ ಸವ್ಮಾನಪತ್ರವಾಚಿಸಿದರು.ಶಿಕ್ಷಕಿಪಂಪಲ ರವಿ ಜೈನ್ ನಿರೂಪಿಸಿದರು.ಮುಖ್ಯಶಿಕ್ಷಕಿಶೈಲಶ್ರೀ ರೈ ಎಸ್.ವಂದಿಸಿದರು.

ಪ್ರಮುಖರಿಗೆಸನ್ಮಾನ

ಕಡಬದಶ್ರೀ ದುರ್ಗಾಂಬಿಕಾ ಅಮ್ಮನವರದೇವಸ್ಥಾನದ ಪ್ರಧಾನ ಅರ್ಚಕಗೋಪಾಲಕೃಷ್ಣ ಕೆದಿಲಾಯ,ಎಡಮಂಗಲಪ್ರಾಥಮಿಕ ಕಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷ ರಾಮಕೃಷ್ಣ ರೈವಾಲೆಂಗ್ರಿ ಹಾಗೂ ಸ ಮಾಜಸೇವಕಚೇತನ್ ಬೊಳುವಾರು ಅವರನ್ನುಸನ್ಮಾನಿಸಲಾಯಿತು.