ಉಗರಗೋಳ : ನಮ್ಮ ದೇಶದಲ್ಲಿರುವ ರಕ್ತದ ಕೊರತೆ ನೀಗಿಸಲು ಪ್ರತಿ ಗ್ರಾಮದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ, ಜನರಿಗೆ ರಕ್ತದಾನದ ಪ್ರಯೋಜನಗಳ ಕುರಿತು ಅರಿವು ಮೂಡಿಸಬೇಕು ಎಂದು ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಿಯಾಜ್ ಮೆಣಸಿನಕಾಯಿ ಹೇಳಿದರು.
ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸವದತ್ತಿ ತಾಪಂ, ಉಗರಗೋಳ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತದಾನದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಇಂದು ಜಾಗೃತಿಯ ಕೊರತೆಯಿಂದಾಗಿ ಅನೇಕ ಜನರು ರಕ್ತದಾನದಿಂದ ದೂರ ಉಳಿಯುತ್ತಿದ್ದಾರೆ. ಈ ಮನಸ್ಥಿತಿ ಬದಲಾಗಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಆನಂದ ಮೂಗಬಸವ ಮಾತನಾಡಿ, ಸದೃಢ ಆರೋಗ್ಯ ಹೊಂದಿರುವವರು ತುರ್ತು ಸಂದರ್ಭ ರಕ್ತದಾನ ಮಾಡಬೇಕು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವವರ ಜೀವ ಉಳಿಸಲು ನೆರವಾಗಬೇಕು ಎಂದು ತಿಳಿಸಿದರು. ಡಾ.ಆರ್.ಜಿ. ಪಾಟೀಲ, ಡಾ.ಸುರೇಖಾ, ಡಾ.ಜ್ಯೋತಿ ಬಸರಿ, ಆಪ್ತಸಮಾಲೋಚಕ ಶಂಕರ ಬಾರಿಗಿಡದ, ವಿ.ಕೆ.ಪಾಟೀಲ, ರುದ್ರಮ್ಮ, ಎ್.ಎಚ್.ಶೇಖ, ಈರಯ್ಯ ದಿಗಂಬರಮಠ, ನಾಗರಾಜ ಬಡೆಪ್ಪನವರ ಇದ್ದರು. 25ಕ್ಕೂ ಅಧಿಕ ಜನ ರಕ್ತದಾನ ಮಾಡಿದರು.