ಜಿಲ್ಲೆ

ರಕ್ತದಾನ ಜಾಗೃತಿಗೆ ವಾಕಥಾನ್

ಪಂಕಜ ಕೆ.ಎಂ.

ಬೆಂಗಳೂರು: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ರಕ್ತ ಪರಿಚಲನಾ ಪರಿಷತ್, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಹಾಗೂ ಲಯನ್ಸ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ರಕ್ತಕೇಂದ್ರ ಮತ್ತು ಬೆಳಗಾವಿ ರಕ್ತಕೇಂದ್ರಗಳ ಸಹಯೋಗದಲ್ಲಿ ಶುಕ್ರವಾರ (ಜೂ. 14) ಕಬ್ಬನ್ ಉದ್ಯಾನದಿಂದ ಕಂಠೀರವ ಕ್ರೀಡಾಂಗಣದವೆರೆಗೆ ವಾಕಥಾನ್ ಆಯೋಜಿಸಲಾಗಿದೆ.

ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವಾಕಥಾನ್‌ಗೆ ಚಾಲನೆ ನೀಡಲಿದ್ದು, ರಕ್ತದಾನ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ನಿರ್ದೇಶಕರು ತಿಳಿಸಿದ್ದಾರೆ.