Oplus_131072 
ಜಿಲ್ಲೆ

ಯುವಜನರು ರಕ್ತದಾನಕ್ಕೆ ಮುಂದಾಗಲಿ

ಎ. ಆರ್. ರಘುರಾಮ

ವಿರಾಜಪೇಟೆ : ತುರ್ತು ಸಂದರ್ಭ ಮತ್ತೊಬ್ಬರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ರಕ್ತದಾನ ಪುಣ್ಯದ ಕೆಲಸವಾಗಿದ್ದು, ಯುವಜನರು ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದರು.

ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಎನ್ನೆಸ್ಸೆಸ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಮೈಸೂರಿನ ಸಂತ ಜೋಸೆಫ್ ರಕ್ತನಿಧಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಾಯ ಮಾಡಿ: ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಮದಲೈ ಮುತ್ತು ಮಾತನಾಡಿಮತ್ತೊಬ್ಬರಿಗೆ ನಾವು ಸಹಾಯ ಮಾಡಿದಾಗ ನಮ್ಮ ಆರೋಗ್ಯ ಹಿತಕರವಾಗುತ್ತದೆ. ತಾನು ಬದುಕಿ ಇತರರನ್ನೂ ಬದುಕಿಸಬೇಕು ಎಂಬುದು ನಮ್ಮ ಧ್ಯೇಯವಾಗಬೇಕು ಎಂದರು.

ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾದರ್ ಜೇಮ್ಸ್ ಡೊಮಿನಿಕ್ ಅವರು ರಕ್ತದಾನದ ಮಹತ್ವ, ಆರೋಗ್ಯ ಜಾಗೃತಿ ಬಗ್ಗೆ ಮಾತನಾಡಿದರು. ಮೈಸೂರಿನ ಸಂತ ಜೋಸೆಫ್ ಆಸ್ಪತ್ರೆ ರಕ್ತನಿಧಿ ಘಟಕದ ಡಾ. ಇಬ್ರಾಹಿಂ ಅವರು ರಕ್ತದಾನದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರ ನೀಡಿದರು. ಎನ್ನೆಸ್ಸೆಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ, ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ ಇತರರು ಇದ್ದರು.