ರಕ್ತದಾನದಿಂದ ದೇಹ ಹಾಗೂ ಮಾನಸಿಕ ಸ್ವಾಸ್ಥ್ಯ ಸಾಧ್ಯ ಹಾಗೂ ಅಪಘಾತಗಳಿಗೆ ಸಿಲುಕಿದ ಜೀವಿಗಳಿಗೆ ಆಪತ್ ಕಾಲದಲ್ಲಿ ತಾವು ಮಾಡಿದ ರಕ್ತದಾನ ಅನುಕೂಲ ವಾಗುವುದು ಹೀಗಾಗಿ ವರ್ಷದಲ್ಲಿ ಎರಡು ಬಾರಿಯಾದರೂ ಪ್ರತಿಯೊಬ್ಬ ವ್ಯಕ್ತಿ ರಕ್ತದಾನವನ್ನು ಮಾಡಬೇಕು ಅಲ್ಲದೆ ದಾನಗಳಲ್ಲಿ ಶ್ರೇಷ್ಠದಾನ ರಕ್ತಧಾರವಾಗಿದೆ ಎಂದು ಶ್ರೀ ಕೆ. ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ಪ ಮ ಕುರಿ ಹೇಳಿದರು.
ಹುಲಕೋಟಿಯ ಶ್ರೀ ಕೆ. ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ಎನ್.ಎಸ್.ಎಸ್., ಭಾರತ ಸೌಟ್ಸ್ ಮತ್ತು ಗೈಡ್ಸ್ ಘಟಕ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ, ಡಿ.ಎ.ಪಿ.ಸಿ.ಯು. ವಿಭಾಗ ಮತ್ತು ರೆಡ್ ರಿಬ್ಬನ್ ಕ್ಲಬ್ ಗದಗ ಇವರ ಸಹಯೋಗದಲ್ಲಿ ದಿನಾಂಕ ೦೭/೦೬/೨೦೨೪ ರಂದು ಹಮ್ಮಿಕೊಳ್ಳಲಾಗಿದ್ದ “ರಕ್ತದಾನ ಶಿಬಿರ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಘಾಟನೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗಳಿಂದ ರಕ್ತದಾನ ನಡೆಯಿತು ಸುಮಾರು ೬೦ ಜನ ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಅರುಂಧತಿ ಕೆ. ಜಿಲ್ಲಾ ಆರೋಗ್ಯ ಇಲಾಖೆ, ಗದಗ, ಡಾ. ಮಹೇಶ ಪಾಟೀಲ, ಎಂ.ಒ. ಜಿಮ್ ಬ್ಲಡ್ ಬ್ಯಾಂಕ್, ಗದಗ ಶ್ರೀ ಬಸವರಾಜ ಲಾಲಗಟ್ಟಿ, ಜಿಲ್ಲಾ ಮೇಲ್ವಿಚಾರಕರು, ಗದಗ ಡಾ. ಸುಧಾ ಕೌಜಗೇರಿ, ಮುಖ್ಯಸ್ಥರು, ಕನ್ನಡ ವಿಭಾಗ ಡಾ. ಲಕ್ಷ್ಮಣ ಸಿ. ಮುಳಗುಂದ, ಮುಖ್ಯಸ್ಥರು, ವಾಣಿಜ್ಯ ವಿಭಾಗ ಡಾ. ಉಲ್ಲಾಸ್ ಶೆಟ್ಟಿ, ಮುಖ್ಯಸ್ಥರು, ವಿಜ್ಞಾನ ವಿಭಾಗ ಪ್ರೊ. ಮಹಾನಂದ ವಿ. ಹಿರೇಮಠ ಸಂಯೋಜಕರು, ಯುವ ರೆಡ್ ಕ್ರಾಸ್ ಘಟಕ,
ಡಾ. ಅಪ್ಪಣ್ಣ ಎನ್. ಹಂಜೆ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು, ಡಾ. ಮಂಜುನಾಥ ತ್ಯಾಲಗಡಿ ಸಹ ಸಂಚಾಲಕರು, ಐ.ಕ್ಯೂ.ಎ.ಸಿ. ಪ್ರೊ. ಪ್ರಶಾಂತ ಹುಲಕುಂದ ಸಂಯೋಜಕರು, ಭಾರತ ಸೌಟ್ಸ್ &ಗೈಡ್ಸ್, ಡಾ. ಜಿತೇಂದ್ರ ಆರ್. ಜಾಹಾಗೀರದಾರ ಸಂಚಾಲಕರು, ಐ.ಕ್ಯೂ.ಎ.ಸಿ. ಇವರು ಹಾಗೂ ಬೋಧಕ ಮತ್ತು ಬೋಧಿಕೇತರ ಸಿಬ್ಬಂದಿಗಳು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.