ಲಕ್ಷೆ್ಮೕಶ್ವರ: ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜು. 19ರಂದು ರಕ್ತ ಸಂಗ್ರಹಣಾ ಘಟಕ ಕಾರ್ಯಾರಂಭಗೊಳ್ಳಲಿದೆ.
ಪಟ್ಟಣ ಸೇರಿ ನೆರೆಯ ಸವಣೂರ ,ಶಿಗ್ಗಾಂವಿ, ಕುಂದಗೋಳ, ಶಿರಹಟ್ಟಿ ತಾಲೂಕಿನಿಂದ ನಿತ್ಯ ನೂರಾರು ರೋಗಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಾರೆ. ಕೈಗಾ-ಇಳಕಲ್, ಕಲ್ಮಲಾ-ಶಿಗ್ಗಾಂವಿ, ಮಂಗಸೂಳಿ-ಲಕ್ಷೆ್ಮೕಶ್ವರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆ ನಿತ್ಯವೂ ಅಪಘಾತ ಪ್ರಕರಣಗಳು ನಡೆಯುತ್ತಿರುತ್ತವೆ. ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿರುತ್ತದೆ.
ಜಿಲ್ಲೆಯ ಕೆಲ ತಾಲೂಕು ಆಸ್ಪತ್ರೆಗಳಲ್ಲಿಯೂ ಬ್ಲಡ್ ಬ್ಯಾಂಕ್ ಕಾರ್ಯಾರಂಭ ಮಾಡುತ್ತಿಲ್ಲ. ಆದರೆ, ಲಕ್ಷೆ್ಮೕಶ್ವರದ ಸಮುದಾಯದ ಅರೋಗ್ಯ ಕೇಂದ್ರದಲ್ಲಿ 50 ಯೂನಿಟ್ ಸಾಮರ್ಥ್ಯದ ಆಧುನಿಕ ತಂತ್ರಜ್ಞಾನದ ಜೀವ ರಕ್ಷಕ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ.
ತಪಾಸಣೆ ಘಟಕ ಯಂತ್ರ, ಇನ್ಕ್ಯೂಬೇಟರ್, ಮೈಕ್ರೋಸ್ಕೋಪ್, ಸೆಂಟರ್ ಫ್ಯೂಸ್ ಸೇರಿ ಪೂಕರ ಉಪಕರಣಗಳು ಲಭ್ಯವಿದೆ. ಜನರೇಟರ್, ಸೋಲಾರ ವ್ಯವಸ್ಥೆಯೂ ಇದಕ್ಕಿದೆ. ಇದಕ್ಕಾಗಿ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೇ ವಿಶೇಷ ತರಬೇತಿ ಪಡೆದಿದ್ದಾರೆ. ನುರಿತ ಲ್ಯಾಬ್ ಟೆಕ್ನಿಷಿಯನ್ ವಿಜಯ ಮಾಂಡ್ರೆ ಹಲವು ವರ್ಷದಿಂದ ಇದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆ ಅಷ್ಟೇ ಅಲ್ಲದೆ, ನಮ್ಮ ಭಾಗದ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿದೆ. ತುರ್ತು ಸಂದರ್ಭದಲ್ಲಿ ಕಿಮ್್ಸ ಮತ್ತು ಜಿಮ್ಸ್ಗೆ ಕಳುಹಿಸಲೇಬೇಕಾಗಿತ್ತು. ಇದೀಗ ನಮ್ಮ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದರಿಂದ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದೆ.
| ಡಾ.ಶ್ರೀಕಾಂತ ಕಾಟೇವಾಲೆ ಆಡಳಿತಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ