ಜಿಲ್ಲೆ

ಸಿಎ ದಿನಾಚರಣೆ ರಕ್ತದಾನ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆ (ಐಸಿಎಐ) ಹಾಗೂ ರಾಷ್ಟ್ರೊತ್ಥಾನ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಲೆಕ್ಕ ಪರಿಶೋಧಕರ ದಿನದ ಅಂಗವಾಗಿ ಮಂಗಳವಾರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಸಿಎ ಅಸೋಸಿಯೇಶನ್ ಅಧ್ಯಕ್ಷ ಅಕ್ಷಯಕುಮಾರ ಸಿಂಘಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯದರ್ಶಿ ಮಂಜುನಾಥ ಮೇಟಿ, ರಾಮಚಂದ್ರಪ್ಪ ಢವಳಗಿ, ಶೇಷಗಿರಿ ಕುಲಕರ್ಣಿ, ರಾಷ್ಟ್ರೊತ್ಥಾನ ಬ್ಲಡ್ ಬ್ಯಾಂಕ್ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಸಂಯೋಜಕ ಶ್ರೀಧರ ಹಲ್ಯಾಳ, ಇತರರು ಇದ್ದರು ಪಾಲ್ಗೊಂಡಿದ್ದರು.

ಅನೇಕ ಜನರು ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಸಿಎ ಕಮಿಟಿ ಸದಸ್ಯರು, ಇತರರಿಗೆ ಪ್ರಮಾಣ ಪತ್ರ ನೀಡಲಾಯಿತು.