ಜಿಲ್ಲೆ

ಕೃಷಿ ಇಲಾಖೆಯಿಂದ ರಕ್ತದಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರಾಜ್ಯೋತ್ಸವ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.

ರೆಡ್ ಕ್ರಾಸ್ ಅಧ್ಯಕ್ಷ ಮಹಾಂತೇಶ ವೀರಾಪುರ, ಡಾ. ಉಮೇಶ ಹಳ್ಳಿಕೇರಿ, ಮನೋಜ ನಾಯಕ್, ಪಿಂಕಿ ಮಾರ್ಗರೇಟ್, ದಯಾನಂದ ಎಸ್, ತಾಜಿಮ್, ಮಹಾಂತೇಶ ಗಾಣಿಗೇರ, ಇತರರು ಇದ್ದರು.